ಶಿಕ್ಷಣ

ಕುಂದಾಪುರದ ಆರ್.ಎನ್.ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ‌ ಗಾಂಧೀಜಿ‌ ಮತ್ತು ಶಾಸ್ತ್ರೀಜಿ ಆಚರಣೆ

Views: 17

ಕನ್ನಡ ಕರಾವಳಿ ಸುದ್ದಿ: ತಂತ್ರಜ್ಞಾನದ ಪ್ರಭಾವದಿಂದ ಜನರು ಇಂದು ಗಾಂಧೀ ತತ್ವವನ್ನು ಮರೆಯುತ್ತಿದ್ದಾರೆ, ಅವರ ಚಿಂತನೆ ಯಾವಕಾಲಕ್ಕೂ ಪ್ರಸ್ತುತವೇ.  ಆ ಕಾಲದಲ್ಲಿಯೇ ರೈತಜೀವನವನ್ನು ಪಾಲಿಸಿದ ಲಾಲ್ ಬಹದ್ದೂರ್ ಶಾಸ್ತ್ರಿಯವರು ಸರ್ವಶ್ರೇಷ್ಠ ನಾಯಕ. ಯಾವುದೇ ಎರಡು ವ್ಯಕ್ತಿತ್ವಗಳ ನಡುವೆ ಹೋಲಿಕೆ ಮಾಡದೇ ಇಂಥ ಶ್ರೇಷ್ಠ ನಾಯಕರು ನಮ್ಮ ದೇಶಕ್ಕೆ ಅಂತ ಉದಾತ್ತ ಕೊಡುಗೆ ಆ ಕಾಲಕ್ಕೇ ನೀಡಿದ್ದರೆಂಬ ಹೆಮ್ಮೆ ನಮ್ಮದಾಗಬೇಕು’ ಎಂದು‌ ಕುಂದಾಪುರದ ಆರ್.ಎನ್. ಶೆಟ್ಟಿ‌ ಪದವಿ ಪೂರ್ವ ಕಾಲೇಜಿನ‌‌ ಪ್ರಾಂಶುಪಾಲರಾದ ಪ್ರೊ. ನವೀನ ಕುಮಾರ ಶೆಟ್ಟಿಯವರು ಕಾಲೇಜಿನಲ್ಲಿ ಆಯೋಜಿಸಿದ ಗಾಂಧೀಜಿ‌‌‌ ಮತ್ತು ಶಾಸ್ತ್ರೀಜಿ ಜಯಂತಿಯ ಆಚರಣೆ‌ಯ ಸಂದರ್ಭದಲ್ಲಿ ತಿಳಿಸಿದರು.

ಇಬ್ಬರು ಮಹಾನ್ ನೇತಾರರ ಭಾವಚಿತ್ರಗಳಿಗೆ ಪುಷ್ಪನಮನ‌ ಸಲ್ಲಿಸಲಾಯಿತು. ಕಾಲೇಜಿನ ಎಲ್ಲ ಬೋಧಕ ಬೋಧಕೇತರ ಸಿಬ್ಬಂಧಿಗಳು ಕಾರ್ಯಕ್ರಮದಲ್ಲಿ‌ ಉಪಸ್ಥಿತರಿದ್ದರು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಕೃಷ್ಣಮೂರ್ತಿ ಡಿ.ಬಿ.ಯವರು ಕಾರ್ಯಕ್ರಮ ನಿರ್ವಹಿಸಿದರು.

Related Articles

Back to top button
error: Content is protected !!