ಇತರೆ

ಕುಂದಾಪುರ:ಕೊಡ್ಲಾಡಿಯಲ್ಲಿ ತಾಯಿಗೆ ಚಿಕಿತ್ಸೆ ಕೊಡಿಸಲಿಲ್ಲವೆಂದು ಮಗಳು, ಅಳಿಯನ ಮೇಲೆ ಹಲ್ಲೆ

Views: 253

ಕನ್ನಡ ಕರಾವಳಿ ಸುದ್ದಿ: ಬಿದ್ದುಕೈ ಮುರಿದುಕೊಂಡ ತಾಯಿಗೆ ಚಿಕಿತ್ಸೆ ಕೊಡಿಸಲಿಲ್ಲವೆಂದು ಮಗಳು ಮತ್ತು ಅಳಿಯನ ಮೇಲೆ ಸಂತ್ರಸ್ತೆಯ ಸಂಬಂಧಿಕರು ಹಲ್ಲೆ ಮಾಡಿದ ಘಟನೆ ಕೊಡ್ಲಾಡಿ ಗ್ರಾಮದ ಹೊಲದಮನೆಯಲ್ಲಿ ನಡೆದಿದೆ.

ಕೊಡ್ಲಾಡಿ ನಿವಾಸಿ ಗಿರಿಜಾ ಬಿದ್ದು ಕೈ ಮುರಿದುಕೊಂಡಿದ್ದರು. ಚಿಕಿತ್ಸೆ ಕೊಡಿಸಬೇಕಾದ ಮಗಳು ಹಾಗೆ ಮಾಡದಿದ್ದಾಗ ಗಿರಿಜಾ  ತನ್ನ ಸಂಕಟವನ್ನು ಸಂಬಂಧಿ ರಾಮ ಮೊಗವೀರ ಅವರ ಬಳಿ ಹೇಳಿಕೊಂಡಿದ್ದರು. ರಾಮ ಮತ್ತು ಮಗ ಭರತ್ ಅವರು ಮನೆಗೆ ಬಂದು ಮಗಳು ಇಂದಿರಾ ಮತ್ತು ಪತಿ ಸತೀಶ ಮೊಗವೀರ ಅವರ ಬಳಿ ಈ ಬಗ್ಗೆ ಆಕ್ಷೇಪ ಎತ್ತಿದರು. ಮಾತಿಗೆ ಮಾತು ಬೆಳೆದಾಗ ರಾಮ ಮತ್ತು ಭರತ್ ಅವರು ಇಂದಿರಾ ಮತ್ತು ಸತೀಶ ಅವರ ಮೇಲೆ ಹಲ್ಲೆ ನೆಡೆಸಿದರು. ಈ ಕುರಿತು ಇಂದಿರಾ ನೀಡಿದ ದೂರಿನಂತೆ  ಶಂಕರನಾರಾಯಣ  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!