ಕರ್ನಾಟಕದ 28 ಕ್ಷೇತ್ರಗಳಲ್ಲಿ ಬಿಜೆಪಿ,ಕಾಂಗ್ರೆಸ್, ಜೆಡಿಎಸ್ ಗೆದ್ದ ಸ್ಥಾನಗಳೆಷ್ಟು?

Views: 199
ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಮತ ಎಣಿಕೆ ಮುಗಿದಿದ್ದು ಅಂತಿಮವಾಗಿ ಬಿಜೆಪಿ-ಜೆಡಿಎಸ್ ಮೈತ್ರಿ 19 ಸ್ಥಾನಗಳನ್ನು ಗೆದ್ದಿದೆ. 17 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದ್ದು, ಅದರ ಮಿತ್ರಪಕ್ಷವಾದ ಜೆಡಿಎಸ್ 2 ಸ್ಥಾನಗಳಲ್ಲಿ ಜಯ ಸಾಧಿಸುವಲ್ಲಿ ಯಶಸ್ಲಿಯಾಗಿದೆ. ಇದೇವೇಳೆ ಕಳೆದ ಬಾರಿಯ ಚುನಾವಣೆಯಲ್ಲಿ ಕೇವಲ 1 ಸ್ಥಾನವನ್ನಷ್ಟೇ ಗೆಲ್ಲಲು ಸಫಲವಾಗಿದ್ದ ಕಾಂಗ್ರೆಸ್ ಈ ಬಾರಿ 9 ಸ್ಥಾನಗಳನ್ನು ಗೆದ್ದಿದೆ.
ಬಿಜೆಪಿ: ಬಾಗಲಕೋಟೆ, ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ, ಬೆಂಗಳೂರು ಗ್ರಾಮೀಣ, ಬೆಂಗಳೂರು ದಕ್ಷಿಣ, ಬೆಳಗಾವಿ, ಬಿಜಾಪುರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಕ್ಷಿಣ ಕನ್ನಡ, ಧಾರವಾಡ, ಹಾವೇರಿ, ಮೈಸೂರು, ಶಿವಮೊಗ್ಗ, ತುಮಕೂರು, ಉಡುಪಿ- ಚಿಕ್ಕಮಗಳೂರು, ಉತ್ತರ ಕನ್ನಡಗಳಲ್ಲಿ ಬಿಜೆಪಿ ಗೆದ್ದಿದೆ.
ಜೆಡಿಎಸ್ :ಮಂಡ್ಯ ಮತ್ತು ಕೋಲಾರ ಕ್ಷೇತ್ರಗಳಲ್ಲಿ ಜೆಡಿಎಸ್ ಗೆದ್ದಿದೆ.
ಕಾಂಗ್ರೆಸ್: ಬಳ್ಳಾರಿ, ಬೀದರ್, ಚಾಮರಾಜನಗರ, ಚಿಕ್ಕೋಡಿ, ದಾವಣಗೆರೆ, ಗುಲ್ಬರ್ಗಾ, ಹಾಸನ, ಕೊಪ್ಪಳ ಮತ್ತು ರಾಯಚೂರು ಕ್ಷೇತ್ರಗಳು ಕಾಂಗ್ರೆಸ್ ಗೆದ್ದಿದೆ.
28 ಲೋಕಸಭಾ ಕ್ಷೇತ್ರ ಬಿಜೆಪಿ/ಜೆಡಿಎಸ್/ ಕಾಂಗ್ರೆಸ್ ಫಲಿತಾಂಶ
1. ಬಾಗಲಕೋಟೆ ಪಿಸಿ ಗದ್ದಿಗೌಡರ್ ಸಂಯುಕ್ತಾ ಪಾಟೀಲ್ ಬಿಜೆಪಿ
2. ಬೆಂಗಳೂರು ಕೇಂದ್ರ ಪಿಸಿ ಮೋಹನ್ ಮನ್ಸೂರ್ ಅಲಿಖಾನ್ ಬಿಜೆಪಿ
3. ಬೆಂಗಳೂರು ಉತ್ತರ ಶೋಭಾ ಕರಂದ್ಲಾಜೆ ರಾಜೀವ್ ಗೌಡ ಬಿಜೆಪಿ
4. ಬೆಂಗಳೂರು ಗ್ರಾಮೀಣ ಡಾ ಸಿಎನ್ ಮಂಜುನಾಥ್ ಡಿ ಕೆ ಸುರೇಶ್ ಬಿಜೆಪಿ
5 ಬೆಂಗಳೂರು ದಕ್ಷಿಣ ತೇಜಸ್ವಿ ಸೂರ್ಯ ಸೌಮ್ಯ ರೆಡ್ಡಿ ಬಿಜೆಪಿ
6. ಬೆಳಗಾವಿ ಜಗದೀಶ್ ಶೆಟ್ಟರ್ ಮೃಣಾಲ್ ಹೆಬ್ಬಾಳ್ಕರ್ ಬಿಜೆಪಿ
7. ಬಳ್ಳಾರಿ ಶ್ರೀರಾಮುಲು ಇ ತುಕಾರಾಂ ಕಾಂಗ್ರೆಸ್
8 ಬೀದರ್ ಭಗವಂತ ಖೂಬಾ ಸಾಗರ್ ಖಂಡ್ರೆ ಕಾಂಗ್ರೆಸ್
9. ಬಿಜಾಪುರ ರಮೇಶ್ ಜಿಗಜಿಣಗಿ ಎಚ್ ರಾಜು ಅಲಗೂರು ಬಿಜೆಪಿ
10 ಚಾಮರಾಜನಗರ ಬಾಲರಾಜ್ ಎಸ್ ಸುನಿಲ್ ಬೋಸ್ ಕಾಂಗ್ರೆಸ್
11 ಚಿಕ್ಕಬಳ್ಳಾಪುರ ಕೆ ಸುಧಾಕರ್ ರಕ್ಷಾ ರಾಮಯ್ಯ ಬಿಜೆಪಿ
12 ಚಿಕ್ಕೋಡಿ ಅಣ್ಣಾಸಾಹೇಬ್ ಜೊಲ್ಲೆ ಪ್ರಿಯಾಂಕಾ ಜಾರಕಿಹೊಳಿ ಕಾಂಗ್ರೆಸ್
13 ಚಿತ್ರದುರ್ಗ ಗೋವಿಂದ ಕಾರಜೋಳ ಬಿಎನ್ ಚಂದ್ರಪ್ಪ ಬಿಜೆಪಿ
14 ದಕ್ಷಿಣ ಕನ್ನಡ ಬ್ರಿಜೇಶ್ ಚೌಟ ಪದ್ಮರಾಜ್ ಆರ್ ಪೂಜಾರಿ ಬಿಜೆಪಿ
15. ದಾವಣಗೆರೆ ಗಾಯತ್ರಿ ಸಿದ್ದೇಶ್ವರ್ ಪ್ರಭಾ ಮಲ್ಲಿಕಾರ್ಜುನ್ ಕಾಂಗ್ರೆಸ್
16. ಧಾರವಾಡ ಪ್ರಹ್ಲಾದ ಜೋಶಿ ವಿನೋದ್ ಅಸೂಟಿ ಬಿಜೆಪಿ
17 ಗುಲ್ಬರ್ಗಾ ಉಮೇಶ್ ಜಾಧವ್ ರಾಧಾಕೃಷ್ಣ ದೊಡ್ಡಮನಿ ಕಾಂಗ್ರೆಸ್
18. ಹಾಸನ ಪ್ರಜ್ವಲ್ ರೇವಣ್ಣ ಶ್ರೇಯಸ್ ಪಟೇಲ್ ಕಾಂಗ್ರೆಸ್
19 ಹಾವೇರಿ ಬಸವರಾಜ ಬೊಮ್ಮಾಯಿ ಆನಂದಸ್ವಾಮಿ ಗಡ್ಡದೇವರಮಠ ಬಿಜೆಪಿ
20 ಕೋಲಾರ ಎಂ ಮಲ್ಲೇಶ್ ಬಾಬು ಕೆವಿ ಗೌತಮ್ ಜೆಡಿಎಸ್
21 ಕೊಪ್ಪಳ ಬಸವರಾಜ್ ಎಸ್ ಕೆ ರಾಜಶೇಖರ್ ಹಿಟ್ನಾಳ್ ಕಾಂಗ್ರೆಸ್
22 ಮಂಡ್ಯ ಎಚ್ ಡಿ ಕುಮಾರಸ್ವಾಮಿ ಸ್ಚಾರ್ ಚಂದ್ರು ಜೆಡಿಎಸ್
23 ಮೈಸೂರು ಯದುವೀರ್ ಒಡೆಯರ್ ಎಂ ಲಕ್ಷ್ಮಣ್ ಬಿಜೆಪಿ
24. ರಾಯಚೂರು ರಾಜಾ ಅಮರೇಶ್ವರ್ ನಾಯ್ಕ್ ಜಿ ಕುಮಾರ್ ನಾಯಕ್ ಕಾಂಗ್ರೆಸ್
25. ಶಿವಮೊಗ್ಗ ಬಿವೈ ರಾಘವೇಂದ್ರ ಗೀತಾ ಶಿವರಾಜಕುಮಾರ್ ಬಿಜೆಪಿ
26. ತುಮಕೂರು ವಿ ಸೋಮಣ್ಣ ಮುದ್ದಹನುಮೇಗೌಡ ಬಿಜೆಪಿ
27. ಉಡುಪಿ- ಚಿಕ್ಕಮಗಳೂರು ಕೋಟ ಶ್ರೀನಿವಾಸ ಪೂಜಾರಿ ಜಯಪ್ರಕಾಶ್ ಹೆಗ್ಡೆ ಬಿಜೆಪಿ
28 ಉತ್ತರ ಕನ್ನಡ ವಿಶ್ವೇಶ್ವರ ಹೆಗಡೆ ಕಾಗೇರಿ ಅಂಜಲಿ ನಿಂಬಾಳ್ಕರ್ ಬಿಜೆಪಿ






