ಶಿಕ್ಷಣ
ಕಮಲಶಿಲೆ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಸುರೇಂದ್ರ ಶೆಟ್ಟಿ ಕೋಟೆಬೆಟ್ಟು ಅವರಿಗೆ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿ ಪ್ರಧಾನ
Views: 260
ಕನ್ನಡ ಕರಾವಳಿ ಸುದ್ದಿ:ಅಂತರಾಷ್ಟ್ರೀಯ ಶಿಕ್ಷಕರ ದಿನಾಚರಣೆ ಅಂಗವಾಗಿ ಕರ್ನಾಟಕ ರಾಜ್ಯ ಶಿಕ್ಷಣ ಸಂಸ್ಥೆಗಳ ನೌಕರರ ಸಂಘ ಬೆಂಗಳೂರು ಇವರು ಶೈಕ್ಷಣಿಕ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ಪ್ರೌಢಶಾಲೆ ಕಮಲಶಿಲೆಯ ಮುಖ್ಯ ಶಿಕ್ಷಕರಾದ ಸುರೇಂದ್ರ ಶೆಟ್ಟಿ ಕೋಟೆಬೆಟ್ಟು ಅವರಿಗೆ ರಾಜ್ಯಮಟ್ಟದ ಶಿಕ್ಷಕ ರತ್ನ ಪ್ರಶಸ್ತಿಯನ್ನು ಇತ್ತೀಚೆಗೆ ಬೆಂಗಳೂರಿನ ಸರಕಾರಿ ಕಲಾ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ನೀಡಿ ಗೌರವಿಸಿದರು.
ನಿವೃತ್ತ ಲೋಕಾಯುಕ್ತ ನಾಯ್ಯಮೂರ್ತಿ ಜಸ್ಟಿಸ್ ಸಂತೋಷ ಹೆಗ್ಡೆ ಅವರು ಪ್ರಶಸ್ತಿ ಪ್ರದಾನ ಮಾಡಿದರು ಈ ಸಂದರ್ಭದಲ್ಲಿ ವಿಜಯಪುರದ ವನಶ್ರೀ ಸಂಸ್ಥಾನಮಠದ ಪೀಠಾಧಿಪತಿ ಡಾ।ಜಯ ಬಸವ ಮಹಾಸ್ವಾಮಿ ಕರ್ನಾಟಕ ರಾಜ್ಯ ಶಿಕ್ಷಣ ಸಂಸ್ಥೆಗಳ ನೌಕರರ ಸಂಘದ ರಾಜ್ಯಾಧ್ಯಕ್ಷರು ಶ್ರೀ ಶೈಲ ಎಸ್ ಗಡದಿನ್ನಿ ಕಾರ್ಯದ್ಯಕ್ಷ ಡಾ। ಜಯಶೀಲ ಶೆಟ್ಟಿ ಸಂಗನಗೌಡ ಪಾಟೀಲ ಕಲ್ಲೂರು ಮತ್ತಿತರು ಉಪಸ್ಥಿತರಿದ್ದರು.






