ಜನಮನ
ಏಪ್ರಿಲ್.14 ಅಂಬೇಡ್ಕರ್ ಜನ್ಮ ದಿನಾಚರಣೆ: ಸಾರ್ವಜನಿಕ ರಜೆ ಘೋಷಿಸಿದ ಕೇಂದ್ರ ಸರ್ಕಾರ

Views: 137
ಕನ್ನಡ ಕರಾವಳಿ ಸುದ್ದಿ: ಭಾರತ ಸರ್ಕಾರವು ಸೋಮವಾರ, ಏಪ್ರಿಲ್ 14, 2025 ರಂದು ದೇಶಾದ್ಯಂತ ಕೈಗಾರಿಕಾ ಸಂಸ್ಥೆಗಳು ಸೇರಿದಂತೆ ಎಲ್ಲಾ ಕೇಂದ್ರ ಸರ್ಕಾರಿ ಕಚೇರಿಗಳಿಗೆ ಸಾರ್ವಜನಿಕ ರಜಾ ದಿನವೆಂದು ಅಧಿಕೃತವಾಗಿ ಘೋಷಿಸಿದೆ.
ಈ ಬಗ್ಗೆ ಕೇಂದ್ರ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು “ಸಂವಿಧಾನದ ಶಿಲ್ಪಿ ಸಮಾಜದಲ್ಲಿ ಸಮಾನತೆಯ ಹೊಸ ಯುಗವನ್ನು ಸ್ಥಾಪಿಸಿದವರು, ನಮ್ಮ ಗೌರವಾನ್ವಿತ ಬಾಬಾ ಸಾಹೇಬ್ ಡಾ.ಭೀಮರಾವ್ ಅಂಬೇಡ್ಕರ್ ಅವರ ಜನ್ಮದಿನಾಚರಣೆಯಂದು ಸಾರ್ವಜನಿಕ ರಜೆ ಇರುತ್ತದೆ” ಎಂದು ಬರೆದುಕೊಂಡಿದ್ದಾರೆ.
“ಈ ನಿರ್ಧಾರವನ್ನು ತೆಗೆದುಕೊಳ್ಳುವ ಮೂಲಕ ಬಾಬಾ ಸಾಹೇಬ್ ಅವರ ನಿಷ್ಠಾವಂತ ಅನುಯಾಯಿ, ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರದ ಭಾವನೆಗಳನ್ನು ಗೌರವಿಸಿದ್ದಾರೆ” ಎಂದು ಶೇಖಾವತ್ ಹೇಳಿದ್ದಾರೆ.