ಸಾಂಸ್ಕೃತಿಕ
ಎ. 2 ಕ್ಕೆ ಪದ್ಯ ಪಂಚಾಮೃತ ಬಿಡುಗಡೆ
Views: 0
ನಾಗೂರಿನ ಉಳ್ಳೂರು ಮೂಕಜ್ಜಿ ಪ್ರತಿಷ್ಠಾನ ಪ್ರಕಟಿಸಿದ ಬವಳಾಡಿ ಹೆಬ್ಬಾರ ಕುಟುಂಬದ ಸಹೋದರ ಸಹೋದರಿಯರಾದ ಮೊಗೇರಿ ಸರಸ್ಪತಿ ಅಡಿಗ, ಬವಳಾಡಿ ವೆಂಕಟರಮಣ ಹೆಬ್ಬಾರ, ಉಳ್ಳೂರು ಸರಸ್ವತಿ ಉಡುಪ, ಬವಳಾಡಿ ಹಿರಿಯಣ್ಣ ಹೆಬ್ಬಾರ್, ಬವಳಾಡಿ ಸೀತಾರಾಮ ಹೆಬ್ಬಾರ್ ರಚಿಸಿದ ಸಂಪ್ರದಾಯದ ಹಾಡುಗಳ ಸಂಕಲನ ‘ಪದ್ಯಪಂಚಾಮೃತ’ದ ಅನಾವರಣವು ಎ 2 ರ ಸಂಜೆ 3 ಕ್ಕೆ ನಾಗೂರು ಒಡೆಯರಮಠ ಶ್ರೀ ಗೋಪಾಲಕೃಷ್ಣ ಕಲಾಮಂದಿರದಲ್ಲಿ ನಡೆಯುವುದು.
ಹಿರಿಯ ವಕೀಲ, ಸಾಹಿತಿ ಎ. ಎಸ್. ಎನ್. ಹೆಬ್ಬಾರ್ ಅಧ್ಯಕ್ಷತೆ ವಹಿಸಲಿದ್ದು, ಆಕಾಶವಾಣಿಯ ನಿವೃತ್ತ ನರ‍್ದೇಶಕ, ಸಾಹಿತಿ ಡಾ. ವಸಂತಕುಮಾರ ಪರ‍್ಲ ಪುಸ್ತಕ ಬಿಡುಗಡೆಗೊಳಿಸಿ, ಪರಿಚಯಿಸುವರು. ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಬಿ. ವಿಶ್ವೇಶ್ವರ ಅಡಿಗ ಅತಿಥಿಗಳಾಗಿರುವರು ಎಂದು ಪ್ರತಿಷ್ಠಾನದ ಯು. ಸುಬ್ರಹ್ಮಣ್ಯ ಐತಾಳ ಪ್ರಕಟಿಸಿದ್ದಾರೆ.






