ಎನ್ಡಿಎ ಒಗ್ಗಟ್ಟು ಪ್ರದರ್ಶನ,ಇಂಡಿಯಾ ನಾಯಕರಿಂದ ಆಫರ್ ರಿಜೆಕ್ಟ್ ಮಾಡಿ ಮೋದಿ ಜೊತೆ ನಿಲ್ಲಲು ಆ ಇಬ್ಬರು ನಾಯಕರ ಬೇಡಿಕೆಗಳೇನು?

Views: 122
ದೆಹಲಿ:ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಸಿಗದಿದ್ದಕ್ಕೆ ರಾಷ್ಟ್ರ ರಾಜಕಾರಣದಲ್ಲಿ ರಾಜಕೀಯ ಸದ್ದು-ಗದ್ದಲಗಳು ಏರ್ಪಟ್ಟಿವೆ. ಪ್ರಧಾನಿ ಗದ್ದುಗೆ ಏರಲು ಎನ್ಡಿಎ ಬಳಿ ಬೇಕಾದ ಬಲವಿದ್ರೂ ವಿರೋಧಿ ಬಣವು ಸರ್ಕಾರ ರಚಿಸಲು ಸರ್ಕಸ್ ಮಾಡ್ತಿದೆ. ಹೀಗಾಗಿ ಎಲ್ಲರ ಚಿತ್ತ ಟಿಡಿಪಿ, ಜೆಡಿಯು ಕಡೆ ನೆಟ್ಟಿದೆ. ಆದ್ರೆ ಎರಡೂ ಪಕ್ಷಗಳು ಎನ್ಡಿಎ ಜೊತೆಗೆ ಗುರುತಿಸಿಕೊಂಡಿವೆ. ಎನ್ಡಿಎ ಮಿತ್ರರ ಜೊತೆ ಸಭೆಯಲ್ಲೂ ಭಾಗಿಯಾಗಿ ಒಗ್ಗಟ್ಟು ಪ್ರದರ್ಶಿಸಿವೆ.
ಅದ್ಯಾವಾಗ ಬಿಜೆಪಿಗೆ ಬಹುಮತ ಬರಲಿಲ್ಲವೋ ಕೇಸರಿ ಪಾಳಯ ಟೆನ್ಷನ್ನಲ್ಲಿದೆ. ಅತ್ತ ವಿರೋಧಿ ಬಣ ಇಂಡಿಯಾ ಕೂಟವು ತನ್ನ ಮಿತ್ರಪಕ್ಷಗಳನ್ನು ಸೆಳೆಯಲು ಸರ್ಕಸ್ ಮಾಡ್ತಿದೆ. ಹೀಗಾಗಿ ನಿನ್ನೆ ದೆಹಲಿಯಲ್ಲಿ ಬಿಜೆಪಿ ಎನ್ಡಿಎ ಮಿತ್ರಕೂಟದ ಸಭೆ ನಡೆಸಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಸಭೆ ನಡೆಸಿ ತಮ್ಮ ಒಗ್ಗಟ್ಟಿನ ಪ್ರದರ್ಶನ ಮಾಡಿದ್ದಾರೆ. ಸಭೆಯಲ್ಲಿ ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು, ಹೆಚ್ಡಿಕೆ, ಪವನ್ ಕಲ್ಯಾಣ್, ಚಿರಾಗ್ ಪಾಸ್ವಾನ್, ಏಕ್ನಾಥ್ ಶಿಂಧೆ ಸೇರಿದಂತೆ ಮೈತ್ರಿಪಕ್ಷಗಳ ಪ್ರಮುಖ ನಾಯಕರು ಭಾಗಿಯಾಗಿದ್ದರು. ನಾಯಕರೆಲ್ಲರು ಸರ್ಕಾರ ರಚನೆಗೆ ಬೆಂಬಲ ಪತ್ರವನ್ನೂ ನೀಡಿದ್ದಾರೆ
ಮಂಗಳವಾರ ಲೋಕಸಭಾ ಚುನಾವಣಾ ಫಲಿತಾಂಶ ಬರುತ್ತಲೇ ನಿತೀಶ್ ಕುಮಾರ್ ಹಾಗೂ ಚಂದ್ರಬಾಬು ನಾಯ್ಡುಗೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಇಬ್ಬರ ಜೊತೆಯೂ ಇಂಡಿಯಾ ಮೈತ್ರಿಕೂಟದ ನಾಯಕರು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಮೂಲಕ ಮಾತನಾಡಿದ್ದಾರೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಚಂದ್ರಬಾಬು ನಾಯ್ಡು ಜೊತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನಿತೀಶ್ ಕುಮಾರ್ ಜೊತೆ ಮಾತನಾಡಿದ್ದು, ಎನ್ಡಿಎನಲ್ಲಿಯೇ ಉಳಿಯುವಂತೆ ಮನವಿ ಮಾಡಿದ್ದಾರೆ. ಈ ವೇಳೆ ಇಬ್ಬರು ನಾಯಕರು ಎನ್ಡಿಎ ಮುಂದೆ ತಮ್ಮದೇ ಆದ ಬೇಡಿಕೆಗಳನ್ನು ಇಟ್ಟಿದ್ದಾರೆ. ಜೊತೆಗೆ ಇಂಡಿ ಒಕ್ಕೂಟ ತಮಗೆ ನೀಡಿರುವ ಆಫರ್ಗಳನ್ನು ಕೂಡ ತಿಳಿಸಿದ್ದಾರೆ ಎಂಬುದು ಗೊತ್ತಾಗಿದೆ.
ಇಬ್ಬರು ಕೂಡ ಎನ್ಡಿಎನ ಭಾಗವಾಗಿಯೇ ಇದ್ದವರು. ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗಿನ ಭಿನ್ನಾಭಿಪ್ರಾಯ ಹಾಗೂ ಇತರೆ ಕಾರಣಗಳಿಂದ ಎನ್ಡಿಎಯನ್ನು ತೊರೆದಿದ್ದರು. ಆದರೆ, ಈ ಬಾರಿಯ ಚುನಾವಣೆಗೂ ಮುನ್ನ ಎನ್ಡಿಎ ಮೈತ್ರಿಕೂಟಕ್ಕೆ ಚಂದ್ರಬಾಬು ನಾಯ್ಡು ಹಾಗೂ ನಿತೀಶ್ ಕುಮಾರ್ ಮರಳಿದ್ದರು. ಆದರೆ, ಚುನಾವಣೆ ಫಲಿತಾಂಶದ ಬಳಿಕ ಇಂಡಿಯಾ ನಾಯಕರಿಂದ ದೊಡ್ಡ ದೊಡ್ಡ ಆಫರ್ಗಳು ಇಬ್ಬರಿಗೂ ಬರುತ್ತಿವೆ. ಆ ಆಫರ್ಗಳನ್ನು ರಿಜೆಕ್ಟ್ ಮಾಡಿ ಮೋದಿ ಜೊತೆಯೇ ನಿಲ್ಲಲು ಇಬ್ಬರು ನಾಯಕರು ಕೂಡ ದೊಡ್ಡ ಬೇಡಿಕೆಗಳನ್ನು ಇಟ್ಟಿದ್ದಾರೆ. ಈ ಬಗ್ಗೆ ಅಮಿತ್ ಶಾ ಹಾಗೂ ಮೋದಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.
ಟಿಡಿಪಿ, ಜೆಡಿಯು ನಾಯಕರ ಬೇಡಿಕೆಗಳೇನು?
ಎನ್ಡಿಎ ಮುಂದೆ ಚಂದ್ರಬಾಬು ನಾಯ್ಡು ಬಹು ದೊಡ್ಡ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಜೊತೆಗೆ ತಮ್ಮ ಪಕ್ಷಕ್ಕೆ ಮೂರರಿಂದ ನಾಲ್ಕು ಸಚಿವ ಸ್ಥಾನಗಳನ್ನು ನೀಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಇತ್ತ ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಎನ್ಡಿಎದಲ್ಲಿಯೇ ಉಳಿಯಲು ಮೋದಿ ಕ್ಯಾಬಿನೆಟ್ನಲ್ಲಿ ಪ್ರಮುಖ ಖಾತೆಗಳನ್ನು ತಮ್ಮ ಪಕ್ಷಕ್ಕೆ ಬೇಕು ಎಂದು ಪಟ್ಟು ಹಿಡಿದಿದ್ದಾರೆ






