ಶಿಕ್ಷಣ

ಉಪನ್ಯಾಸ ನೀಡುತ್ತಿದ್ದಾಗಲೇ ವೇದಿಕೆ ಮೇಲೆ ಕುಸಿದುಬಿದ್ದು ಪ್ರಾಧ್ಯಾಪಕ ಮೃತ್ಯು

Views: 4

ಕಾನ್ಪುರ : ವೇದಿಕೆ ಮೇಲೆ ಉಪನ್ಯಾಸ ನೀಡುತ್ತಿರುವ ವೇಳೆ ಹೃದಯಾಘಾತಗೊಂಡು ಐಐಟಿ ಕಾನ್ಪುರದ ಹಿರಿಯ ಉಪನ್ಯಾಸಕರೊಬ್ಬರು ಮೃತಪಟ್ಟ ಘಟನೆ ಶನಿವಾರ ನಡೆದಿದೆ

ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾಗಿದ್ದ ಸಮೀರ್ ಖಂಡೇಕರ್ (53) ಮೃತ ಪ್ರಾಧ್ಯಾಪಕರು.

ಹಳೆಯ ವಿದ್ಯಾರ್ಥಿಗಳ ಸಭೆಯಲ್ಲಿ ಭಾಗವಹಿಸಿದ್ದ ಸಮೀರ್ ಖಂಡೇಕರ್ ಅವರು ವೇದಿಕೆಯಲ್ಲಿ ಉಪನ್ಯಾಸ ನೀಡುತ್ತಿದ್ದರು ಈ ವೇಳೆ ಏಕಾಏಕಿ ಎದೆನೋವು ಕಾಣಿಸಿಕೊಂಡು ವೇದಿಕೆ ಮೇಲೆಯೇ ಕುಸಿದು ಬಿದ್ದಿದ್ದಾರೆ ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟೋತ್ತಿಗಾಗಲೇ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.

ಸುಮಾರು ಐದು ವರ್ಷಗಳ ಹಿಂದೆ ಖಾಂಡೇಕರ್‌ ಅವರಿಗೆ ಅರೋಗ್ಯ ಸಮಸ್ಯೆ ಎದುರಾದಾಗ ಪರೀಕ್ಷೆ ನಡೆಸಿದ ವೈದ್ಯರು ರಕ್ತದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಿರುವುದಾಗಿ ಹೇಳಿದ್ದರು ಎಂದು ಅವರ ಆಪ್ತ ಪ್ರಾಧ್ಯಾಪಕರೊಬ್ಬರು ಹೇಳಿದ್ದರು.ಖಾಂಡೇಕರ್‌ ಅವರ ಅಕಾಲಿಕ ನಿಧಾನಕ್ಕೆ ಐಐಟಿ ಕಾನ್ಪುರದ ಆಡಳಿತ ಮಂಡಳಿ ಆಘಾತ ವ್ಯಕ್ತಪಡಿಸಿದೆ.

Related Articles

Back to top button
error: Content is protected !!