ಇತರೆ

ಉಡುಪಿ: ರಸ್ತೆ ಅಪಘಾತ; ಈಚರ್ ಲಾರಿ ಮತ್ತು ಬೈಕ್ ಗೆ ಬೆಂಕಿ, ಸವಾರ ಮೃತ್ಯು

Views: 135

ಕನ್ನಡ ಕರಾವಳಿ ಸುದ್ದಿ: ಉಡುಪಿ ನಗರದ ಹೊರವಲಯದ ಉದ್ಯಾವರ ಬಲೈಪಾದೆ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಬೈಕ್‌ ಸವಾರ ಸಾವನ್ನಪ್ಪಿದ ಘಟನೆ ಸಂಭವಿಸಿದೆ.

ತಡರಾತ್ರಿ ಈ ಅಪಘಾತ ಸಂಭವಿಸಿದ್ದು ಈಚರ್ ಲಾರಿ ಮತ್ತು ಬೈಕ್ ಸುಟ್ಟು ಕರಕಲಾಗಿವೆ. ಸ್ಥಳೀಯ ಪಣಿಯೂರು ನಿವಾಸಿ ಅವಿನಾಶ್ ಆಚಾರ್ಯ (19) ಮೃತ ಬೈಕ್‌ ಸವಾರ. ಪ್ಲೈವುಡ್ ಕೊಂಡೊಯ್ಯುತ್ತಿದ್ದ ಈಚರ್ ವಾಹನಕ್ಕೆ ಬೈಕ್‌ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕನ್ನು ಸ್ವಲ್ಪ ದೂರದವರೆಗೆ ಈಚ‌ರ್ ವಾಹನ ಎಳೆದೊಯ್ದಿದೆ. ಈ ವೇಳೆ ಬೆಂಕಿ ಕಾಣಿಸಿಕೊಂಡು ವಾಹನಗಳು ಸುಟ್ಟು ಕರಕಲಾಗಿವೆ. ಮಧ್ಯರಾತ್ರಿ 1.30ರ ವೇಳೆಗೆ ಈ ರಸ್ತೆ ಅಪಘಾತ ಸಂಭವಿಸಿದ್ದು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.

Related Articles

Back to top button