ಕರಾವಳಿ
ಉಡುಪಿ: ಮಧ್ಯರಾತ್ರಿ ಅರೆಬೆತ್ತಲೆಯಾಗಿ ಓಡುತಿದ್ದ ಯುವಕನನ್ನು ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು.!

Views: 113
ಉಡುಪಿ :ಮಧ್ಯರಾತ್ರಿ ಮಲ್ಪೆ ಹನುಮಾನ್ ನಗರ ಪ್ರದೇಶದಲ್ಲಿ ಅರೆಬೆತ್ತಲೆಯಾಗಿ ಯುವಕನೊಬ್ಬ ಎಲ್ಲರ ಮನೆಯ ಬಾಗಿಲು ತಟ್ಟಿ ಓಡುತ್ತಿದ್ದ ಯುವಕನನ್ನು ಸ್ಥಳೀಯ ನಿವಾಸಿಗಳು ಮಲ್ಪೆ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ಮಲ್ಪೆ ಪೊಲೀಸರ ಅವನ ಮೇಲೆ ತನಿಖೆಯನ್ನು ಕೂಡ ನಡೆಸದೆ ಬಿಟ್ಟು ಕಳಿಸಿದ್ದಾರೆ ಎನ್ನುವುದು ಸ್ಥಳೀಯರ ಸಂಶಯಕ್ಕೆ ಎಡೆ ಮಾಡಿದೆ.
ಹಿಂದೆ ಹಲವಾರು ಬಾರಿ ಕೂಡ ಇಂಥ ಪ್ರಕರಣಗಳು ನಡೆದಿದ್ದು ಈಗ ಮತ್ತೆ ಪುನಃ ಘಟನೆ ಮರುಕಳಿಸಿದಾಗ ಎಚ್ಚೆತ್ತು ಸಾರ್ವಜನಿಕರು ಆರೋಪಿಯನ್ನು ಹಿಡಿದು ಪೊಲೀಸ ಠಾಣೆಗೆ ಒಪ್ಪಿಸಿದ್ದಾರೆ.
ಸ್ಥಳೀಯರನ್ನು ಎರಡು ಗಂಟೆಗಳ ಕಾಲ ಠಾಣೆಯಲ್ಲಿ ಕಾಯಿಸಿ ಇವರನ್ನು ರೈಲ್ವೆ ನಿಲ್ದಾಣಕ್ಕೆ ಬಿಟ್ಟು ಬನ್ನಿ ಎನ್ನುವಂತ ಬೇಜವಾಬ್ದಾರಿ ಹೇಳಿಕೆಗಳನ್ನು ಪೊಲೀಸರು ನೀಡಿದ್ದು ಪೊಲೀಸರ ಮೇಲೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ.
ಮಲ್ಪೆ ಪೊಲೀಸರ ಕಾರ್ಯ ವೈಖರಿ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.






