ಕರಾವಳಿ
ಉಡುಪಿ:ತಲವಾರು ಹಿಡಿದುಕೊಂಡುಎರಡು ತಂಡಗಳ ನಡುವೆ ನಡು ರಸ್ತೆಯಲ್ಲಿ ಹೊಡೆದಾಟ, ಓರ್ವ ಗಂಭೀರ

Views: 1001
ಉಡುಪಿ: ಕಾರು ಮಾರಾಟ ವಿಚಾರವಾಗಿ ಎರಡು ತಂಡಗಳ ತಲವಾರು ಹಿಡಿದುಕೊಂಡು ಹೊಡೆದಾಡಿಕೊಂಡ ಘಟನೆ ನಗರದ ಕುಂಜಿಬೆಟ್ಟು ರಸ್ತೆಯಲ್ಲಿ ನಡೆದಿದೆ.ಈ ದೃಶ್ಯ ಎಲ್ಲೆಡೆ ವೈರಲ್ ಆಗಿದೆ.ಆದರೆ ಈ ವಿಷಯ ತಡವಾಗಿ ಬೆಳಕಿಗೆ ಬಂದಿದೆ.
ಕಾಪು ತಾಲೂಕಿನ ಎರಡು ತಂಡಗಳು ಮೊದಲಿಗೆ ಅಡ್ಡಾದಿಡ್ಡಿ ಕಾರು ಚಲಾಯಿಸಿ ಡಿಕ್ಕಿ ಹೊಡೆದು ಬಡಿದಾಡಿಕೊಂಡಿದ್ದಾರೆ. ಸದ್ಯ ಈ ಪ್ರಕರಣ ಸಂಬಂಧ ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಎರಡು ತಂಡಗಳ.ಎಂಟು ಮಂದಿ ರೌಡಿಗಳನ್ನು ಬಂಧಿಸಿದ್ದಾರೆ. ನ್ಯಾಯಾಲಯವು ಜೂನ್ 1ರವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
ಕಾರು ಮಾರಾಟ ವಿಚಾರದಲ್ಲಿ ಎರಡು ತಂಡಗಳು ಹೊಡೆದಾಡಿಕೊಂಡಿದ್ದಾರೆ. ಗರುಡ ಗ್ಯಾಂಗ್ ಎಂಬ ಹೆಸರಿಟ್ಟುಕೊಂಡಿದ್ದ ಯುವಕರ ತಂಡದಲ್ಲಿ ಶುರುವಾದ ಭಿನ್ನಮತದಿಂದ ಹೊಡೆದಾಡಿಕೊಂಡ ಈ ದಾಳಿಯಲ್ಲಿ ಓರ್ವನಿಗೆ ಗಂಭೀರ ಗಾಯವಾಗಿದೆ. ಪೊಲೀಸರು ಗಾಯಗೊಂಡವರಿಗೆ ಚಿಕಿತ್ಸೆ ನೀಡಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.






