ಕರಾವಳಿ

ಅವಿವಾಹಿತ ಯುವತಿಯೋರ್ವಳು ಮನೆಯಿಂದ ನಾಪತ್ತೆ

Views: 108

ಕನ್ನಡ ಕರಾವಳಿ ಸುದ್ದಿ: ಅವಿವಾಹಿತ ಯುವತಿಯೋರ್ವಳು ಮನೆಯಿಂದ ನಾಪತ್ತೆಯಾಗಿರುವ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬೆಂಜನಪದವು ಎಂಬಲ್ಲಿ ನಡೆದಿದೆ.

ಆಲ್ಬರ್ಟ್‌ ಡಿ’ಸೋಜಾ ಎಂಬವರ ಪುತ್ರಿ ಮರಿಯಾ ಆಲ್ಬರ್ಟ್‌ ಡಿ’ ಸೋಜಾ ಎಂಬುವಳು ಕಾಣೆಯಾದ ಯುವತಿ.

ಮೂಲತಃ ಮುಂಬಯಿ ನಿವಾಸಿಯಾಗಿದ್ದ ಮರಿಯಾ ಕಳೆದ ಐದು ತಿಂಗಳುಗಳಿಂದ ಬೆಂಜನಪದವು ಶಿವಾಜಿ ನಗರದಲ್ಲಿ ಅತ್ತೆ ಮೋಲಿ ಟೆಲ್ಲಿಸ್ ಅವರ ಮನೆಯಲ್ಲಿ ವಾಸವಾಗಿದ್ದಳು. ಒಂದು ವರ್ಷದ ಹಿಂದೆ ಆಕೆಯ ತಾಯಿ ಮೃತಪಟ್ಟಿದ್ದು, ತಂದೆ ಮುಂಬಯಿಯಲ್ಲಿದ್ದಾರೆ.

ಹಾಗಾಗಿ ಮರಿಯಾ ಬೆಂಜನಪದವು ಅತ್ತೆ ಮನೆಯಲ್ಲಿ ವಾಸವಾಗಿದ್ದರು. ನವೆಂಬರ್ 9 ರಂದು ಮೋಲಿ ಟೆಲ್ಲಿಸ್ ಅವರು ಬೆಳಗ್ಗೆ ಚರ್ಚ್ ಗೆ ತೆರಳಿ ಪೂಜೆ ಮುಗಿಸಿ ವಾಪಸ್ ಮನೆಗೆ ಬಂದಾಗ ಮರಿಯಾ ಮನೆಯಲ್ಲಿ ಇಲ್ಲದೆ ಕಾಣೆಯಾಗಿದ್ದಾಳೆ ಎಂದು ಅವರು ಗ್ರಾಮಾಂತರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

Related Articles

Back to top button
error: Content is protected !!