ಇತರೆ
ಅಮಾಸೆಬೈಲು ಸಮೀಪ ಹೊಳೆಯಲ್ಲಿ ಮೀನು ಹಿಡಿಯಲು ಹೋದ ಯುವಕ ನೀರಿಗೆ ಬಿದ್ದು ಸಾವು
Views: 333
ಕನ್ನಡ ಕರಾವಳಿ ಸುದ್ದಿ: ಅಮಾಸೆಬೈಲು ಸಮೀಪ ಹೊಳೆಯಲ್ಲಿ ಮೀನು ಹೋದ ಯುವಕನೊಬ್ಬ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಸಾವನ್ನಪ್ಪಿದ ಘಟನೆ ಸಂಭವಿಸಿದೆ.
ಮೃತಪಟ್ಟ ಯುವಕ ಸುರೇಶ ನಾಯ್ಕ(29)
ಹೆಬ್ರಿ ತಾಲೂಕು ಶೇಡಿಮನೆ ಗ್ರಾಮದ ಜೆ.ಜೆ. ಎಸ್ಠೇಟ್ ಪಕ್ಕ ಮಾವಿನ ಕಾಡು ವಿಮಲನದಿಯಲ್ಲಿ ನ.9ರಂದು ಬೆಳಿಗ್ಗೆ ತಮ್ಮ ಗೆಳೆಯರೊಂದಿಗೆ ಹೆಂಗವಳ್ಳಿ ಶೇಡಿಮನೆ ಪರಿಸರದಲ್ಲಿ ಹೊಳೆಯಲ್ಲಿ ಮೀನು ಹಿಡಿಯಲು ಅಕಸ್ಮಿಕವಾಗಿ ಕಾಲು ಜಾರಿ ಹೊಳೆಯ ನೀರಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತ ಪಟ್ಟಿರುತ್ತಾರೆ.
ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.






