ಕರಾವಳಿ

ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿ ಸಾವು 

Views: 59

ಬೆಳ್ತಂಗಡಿ : ಇಲ್ನಾಲಿನ ನಾರವಿ ಗ್ರಾಮದ ನಜೋಡಿ ಎಂಬಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ, ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ನಡೆದಿದೆ.

ಮೃತಪಟ್ಟ ವ್ಯಕ್ತಿ ಮೋಂಟ ಮಲೆಕುಡಿಯ (76) ಎಂದು ಗುರುತಿಸಲಾಗಿದೆ.

ಮನೆ ಸಮೀಪವಿರುವ ಎಲ್‌.ಟಿ ವಿದ್ಯುತ್ ಲೈನ್‌ನ ಮೇಲೆ ಬಿದ್ದ ತೆಂಗಿನ ಗರಿಯನ್ನು ದೋಂಟಿಯ ಮೂಲಕ ತೆಗೆಯಲು ಹೋದ ಸಂದರ್ಭ ಲೈನ್ ಶಾರ್ಟ್ ಆಗಿ ತಂತಿ ತುಂಡಾಗಿ ನೆಲಕ್ಕೆ ಬಿದ್ದು ಅದನ್ನು ಬೇರ್ಪಡಿಸಲು ಹೋದ ಸಂದರ್ಭದಲ್ಲಿ ವಿದ್ಯುತ್ ತಗಲಿದೆ ಎಂದು ಶಂಕಿಸಲಾಗಿದೆ.

ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Related Articles

Back to top button