ಸಾಮಾಜಿಕ

ಮದುವೆಯಾದ ಕೆಲವೇ ಕ್ಷಣಗಳಲ್ಲಿ ವರ ಕುಸಿದು ಬಿದ್ದು ಸಾವು..ವಧುವಿನ ಕಡೆಯವರ ಆರೋಪವೇನು?

Views: 175

ಕನ್ನಡ ಕರಾವಳಿ ಸುದ್ದಿ: ಮದುವೆಯಾದ ಕೆಲವೇ ಕೆಲವು ಕ್ಷಣಗಳಲ್ಲಿ ವರ ಕುಸಿದು ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದ ಫತೇಪುರಲ್ಲಿ ನಡೆದಿದೆ.

ಮದುವೆ ಸಮಾರಂಭ ಎಲ್ಲ ಯಾವುದೇ ಅಡೆತಡೆ ಇಲ್ಲದೇ ಸಡಗರದಿಂದ, ಅದ್ಧೂರಿಯಾಗಿ ನೆರವೇರಿತ್ತು.ರಾತ್ರಿಯ ವೇಳೆಗೆ ವಿವಾಹದ ಬಹುತೇಕ ಎಲ್ಲಾ ವಿಧಿವಿಧಾನಗಳು ಪೂರ್ಣಗೊಂಡಿದ್ದರಿಂದ ಮದುವೆ ಊಟ ಕೂಡ ಭರ್ಜರಿಯಾಗಿ ಸಾಗಿತ್ತು. ಇತ್ತ ವಧುವನ್ನು ಅವರ ತವರು ಮನೆಗೆ ಕಳುಹಿಸಿ ಕೊಡುವ ಶಾಸ್ತ್ರ ನಡೆಯುತ್ತಿತ್ತು. ಆದರೆ ಈ ವೇಳೆ ಇದ್ದಕ್ಕೆ ಇದ್ದಾಗೆ ಮೋನು ಗೌತಮ್ ಪ್ರಜ್ಞೆ ತಪ್ಪಿ ಕುಸಿದು ನೆಲಕ್ಕೆ ಬಿದ್ದಿದ್ದಾನೆ.ತಕ್ಷಣ ವರನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಸ್ಪತ್ರೆಯಲ್ಲಿ ವರನ ಸ್ಥಿತಿ ಪರೀಕ್ಷಿಸಿ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಕಾನ್ಪುರಕ್ಕೆ ಕರೆದೊಯ್ಯಲು ಸೂಚಿಸಿದರು. ಕುಟುಂಬವು ವರನನ್ನು ಚಿಕಿತ್ಸೆಗಾಗಿ ಕಾನ್ಪುರಕ್ಕೆ ಕರೆದೊಯ್ಯುತ್ತಿದ್ದಾಗ, ದಾರಿಯಲ್ಲೇ ವರ ಉಸಿರು ಬಿಟ್ಟಿದ್ದಾನೆ. ಇದರಿಂದ ವಧುವನ್ನು ಅಲ್ಲಿಂದ ತವರಿಗೆ ಕಳುಹಿಸಲು ಆಗಿಲ್ಲ. ಗಂಡ ಪ್ರಾಣ ಬಿಟ್ಟಿದ್ದು, ತವರಿಗೆ ಹಿಂದಿರಗಲು ಆಗದಿರುವುದಕ್ಕೆ ವಧು ಕಣ್ಣೀರು ಹಾಕಿದ್ದಾಳೆ.

ಇನ್ನು ಮದುವೆಗೂ ಮೊದಲೇ ವರನ ಆರೋಗ್ಯದ ಬಗ್ಗೆ ಯಾವುದೇ ಮಾಹಿತಿ ನೀಡದಿದ್ದಕ್ಕೆ ಈ ಘಟನೆಗೆ ಕಾರಣವಾಗಿದೆ. ಹೀಗಾಗಿ ವರನ ಕಡೆಯವರು ವರದಕ್ಷಿಣೆ ಮತ್ತು ಮದುವೆ ಖರ್ಚು ಕೊಡಬೇಕು ಎಂದರೆ ಒತ್ತಾಯ ಮಾಡಿದ್ದಾರೆ. ಸದ್ಯ ಈ ಪಂಚಾಯತಿ ಪೊಲೀಸರ ಬಳಿಗೆ ಹೋಗಿದ್ದು ಎರಡು ಕಡೆಯ ಹಿರಿಯರ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ

Related Articles

Back to top button