ಶಿಕ್ಷಣ
ಮದರ್ ತೆರೇಸಾಸ್ ಪಿಯು ಕಾಲೇಜು ಡಾ.ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ “ಉಗಮ-2024” ರ ಸಮಗ್ರ ಚಾಂಪಿಯನ್

Views: 502
ಮದರ್ ತೆರೇಸಾಸ್ ಪಿಯು ಕಾಲೇಜು ಡಾ.ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ “ಉಗಮ-2024” ರ ಸಮಗ್ರ ಚಾಂಪಿಯನ್
ಶಂಕರನಾರಾಯಣ :ಕುಂದಾಪುರದ ಡಾ. ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ನವೆಂಬರ್ 15, 2024ರಂದು ಆಯೋಜಿಸಿದ ಅಂತರ್ಕಾಲೇಜು ಸ್ಪರ್ಧೆ “ಉಗಮ-2024″ರ ಸಮಗ್ರ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಶಂಕರನಾರಾಯಣದ ಮದರ್ ತೆರೆಸಾಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಮೋಘವಾದ ಸಾಧನೆಗೈದಿದ್ದಾರೆ.
ಇಂಗ್ಲಿಷ್ ಭಾಷಣದಲ್ಲಿ ಸಾನ್ವಿ ಶೆಟ್ಟಿ ಪ್ರಥಮ ಪಾತ್ರ ಪ್ರವೀಣ (ಅಣಕು ಸಂದರ್ಶನ)ದಲ್ಲಿ ಸುಮಂತ್ ಶೆಟ್ಟಿ ದ್ವಿತೀಯ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಮ್ಯಾಡ್ ಆಡ್ ನಲ್ಲಿ ಪ್ರಥಮ ಕ್ಯಾಂಪಸ್ ರೀಲ್ಸ್ ನಲ್ಲಿ ತೃತೀಯ ಸ್ಥಾನವನ್ನು ಪಡೆಯುವುದರ ಮೂಲಕ ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಆಡಳಿತ ಮಂಡಳಿ, ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರು, ವಿದ್ಯಾರ್ಥಿಗಳು ಅಭಿನಂದಿಸಿ, ಸಂತಸದಿಂದ ಶುಭಕೋರಿರುತ್ತಾರೆ.