ಇತರೆ

ಮಗಳ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕನೊಂದಿಗೆ ಪರಾರಿಯಾದ ಮಹಿಳೆ ಮತ್ತೆ ಪರಾರಿ!

Views: 110

ಕನ್ನಡ ಕರಾವಳಿ ಸುದ್ದಿ: ಉತ್ತರ ಪ್ರದೇಶದ ಅಲಿಗಢದಲ್ಲಿ ತನ್ನ ಮಗಳ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕನೊಂದಿಗೆ ಕೆಲವು ತಿಂಗಳುಗಳ ಹಿಂದೆ ಎಸ್ಕೆಪ್ ಆಗಿದ್ದ 43 ವರ್ಷದ ಮಹಿಳೆ ಇದೀಗ ಮತ್ತೆ ಬೇರೊಬ್ಬನ ಜತೆ ಪರಾರಿಯಾಗಿದ್ದಾಳೆ.

ಕೆಲವು ತಿಂಗಳುಗಳ ಹಿಂದೆ ರಾಹುಲ್ ಹೆಸರಿನ ಯುವಕ, ತನ್ನ ಮದುವೆಗೆ ಕೇವಲ 12 ದಿನಗಳು ಬಾಕಿ ಇರುವಾಗಲೇ ತನ್ನ ಭಾವಿ ಅತ್ತೆ ಸ್ವಪ್ನಾ ದೇವಿಯ ಜತೆ ಓಡಿಹೋಗಿದ್ದ. ಅಲ್ಲದೆ, ಆಕೆಯನ್ನು ಮದುವೆ ಸಹ ಆದ. ಈ ಘಟನೆ ದೇಶಾದ್ಯಂತ ಭಾರಿ ಸುದ್ದಿಯಾಗಿತ್ತು. ಇದೀಗ, ಸ್ವಪ್ನಾ ದೇವಿ ತನ್ನ ಹೊಸ ಗಂಡನನ್ನು ಬಿಟ್ಟು ಬೇರೊಬ್ಬನೊಂದಿಗೆ ಓಡಿಹೋಗಿದ್ದಾಳೆ.

ಅಂದಹಾಗೆ, ಸ್ವಪ್ನಾಳ ಮಗಳಿಗೂ ರಾಹುಲ್‌ಗೂ ಆರಂಭದಲ್ಲಿ ನಿಶ್ಚಿತಾರ್ಥ ಆಗಿತ್ತು. ಇದರ ನಡುವೆ ಮನೆಗೆ ಬಂದು ಹೋಗುತ್ತಿದ್ದ ಭಾವಿ ಅಳಿಯನ ಮೇಲೆ ಸ್ವಪ್ನಾಗೆ ಮನಸ್ಸಾಗಿತ್ತು. ರಾಹುಲ್ ಕೂಡ ಭಾವಿ ಅತ್ತೆಯ ಮೇಲೆ ಕಣ್ಣಾಕ್ಕಿದ್ದ. ಬಳಿಕ ಇಬ್ಬರು ಪ್ರೀತಿಯಲ್ಲಿ ಬಿದ್ದರು. ಮದುವೆಗೆ ಕೊನೆಯ ಹಂತದ ಸಿದ್ಧತೆಗಳು ನಡೆಯುತ್ತಿರುವಾಗಲೇ ಸ್ವಪ್ನಾ, ರಾಹುಲ್ ಜತೆ ಎಸ್ಕೆಪ್ ಆದಳು.

ಕೊನೆಗೆ ಸಂಬಂಧಿಕರ ವಿರೋಧದ ನಡುವೆಯೂ, ಇಬ್ಬರೂ ವಿವಾಹವಾದರು ಮತ್ತು ಬಿಹಾರಕ್ಕೆ ತೆರಳಿ ಜತೆಯಾಗಿ ಜೀವನ ನಡೆಸಲು ಆರಂಭಿಸಿದರು. ಈ ವೇಳೆ ಸ್ವಪ್ನಾ ತನ್ನ ಹೆಸರನ್ನು ಬದಲಾಯಿಸಿಕೊಂಡಳು. ಆದಾಗ್ಯೂ, ಮದುವೆಯ ನಂತರ ಸ್ವಪ್ನಾಳ ನಡೆ ಬದಲಾಯಿತು ಅನ್ನೋದು ರಾಹುಲ್ ಆರೋಪ. ಆಕೆ ನನಗೆ ವಿಷ ನೀಡಿ ಕೊಲ್ಲಲು ಪ್ರಯತ್ನಿಸಿದಳು ಎಂದು ರಾಹುಲ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸದ್ಯ, ರಾಹುಲ್ ಅಲಿಗಢದ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ, ಘಟನೆ ಬಿಹಾರದಲ್ಲಿ ನಡೆದಿದ್ದು, ಅಲ್ಲಿಗೆ ಹೋಗಿ ದೂರು ನೀಡಬೇಕೆಂದು ಯುಪಿ ಪೊಲೀಸರು ರಾಹುಲ್‌ಗೆ ತಿಳಿಸಿದ್ದಾರೆ. ಇದು ತಮ್ಮ ವ್ಯಾಪ್ತಿಗೆ ಒಳಪಡುವ ಪ್ರಕರಣವಲ್ಲ ಎಂದು ಯುಪಿ ಪೊಲೀಸರು ರಾಹುಲ್‌ಗೆ ವಿವರಿಸಿದ್ದಾರೆ.

 

 

 

 

Related Articles

Back to top button
error: Content is protected !!