ಕರಾವಳಿ
ಮಂಗಳೂರಿನಿಂದ ಅಯೋಧ್ಯೆ ರಾಮಮಂದಿರಕ್ಕೆ ವಿಶೇಷ ರೈಲು

Views: 158
ಮಂಗಳೂರು, ತಮಿಳುನಾಡಿನ ಕೊಯಮತ್ತೂರಿನಿಂದ ಅಯೋಧ್ಯೆ ರಾಮಮಂದಿರಕ್ಕೆ ತೆರಳಲು ವಿಶೇಷ ರೈಲು ಸಂಚಾರ ಗುರುವಾರ ಮಂಗಳೂರು ಜಂಕ್ಷನ್ ತಲುಪಲಿದೆ. ಮಂಗಳೂರಿನಿಂದ ಅಯೋಧ್ಯೆಗೆ ಸಂಪರ್ಕ ಕಲ್ಪಿಸುವ 06517 ಕೊಯಮತ್ತೂರು-ದರ್ಶನ ನಗರ್-ಕೊಯಮತ್ತೂರು ಆಸ್ತಾ ವಿಶೇಷ ರೈಲಿನ ಸೌಲಭ್ಯ ಕಲ್ಪಿಸಲಾಗಿದೆ. ಈ ರೈಲು ತಮಿಳುನಾಡಿನ ಕನ್ಯಾಕುಮಾರಿಯಿಂದ ಫೆ.8 ಗುರುವಾರ ಸಂಜೆ 5.50ಕ್ಕೆ ಮಂಗಳೂರು ಜಂಕ್ಷನ್‌ಗೆ ಆಗಮಿಸಿ 6 ಗಂಟೆಗೆ ಅಯೋಧ್ಯೆಗೆ ತೆರಳಲಿದೆ. ಫೆ. 11 ರ ಮುಂಜಾನೆ ಅಯೋಧ್ಯೆಯ ದರ್ಶನ್ ನಗರ ರೈಲು ನಿಲ್ದಾಣಕ್ಕೆ ಆಗಮಿಸಲಿದೆ. ಫೆಬ್ರವರಿ 12 ರಂದು ಬೆಳಿಗ್ಗೆ 8 ಗಂಟೆಗೆ ಅಯೋಧ್ಯೆಯಿಂದ ಹಿಂದಿರುಗುವ ಈ ರೈಲು ಫೆಬ್ರವರಿ 14 ರ ಸಂಜೆ ಮಂಗಳೂರು ಜಂಕ್ಷನ್‌ಗೆ ಆಗಮಿಸಲಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.