ಸಾಮಾಜಿಕ
ಬೈಕಾಡಿ ಪದ್ಮಶಾಲಿ ಸಂಘಟನೆ 10ನೇ ವಾರ್ಷಿಕ ಮಹಾಸಭೆ ಮತ್ತು ಸಾಮೂಹಿಕ ಸತ್ಯನಾರಾಯಣ ಪೂಜೆ

Views: 171
ಬ್ರಹ್ಮಾವರ :ಬೈಕಾಡಿ ಪದ್ಮಶಾಲಿ ಸಂಘಟನೆಯ 10ನೇ ವಾರ್ಷಿಕ ಮಹಾಸಭೆ ಮತ್ತು ಸಾಮೂಹಿಕ ಸತ್ಯನಾರಾಯಣ ಪೂಜೆ ಬೈಕಾಡಿ ಗಾಂಧಿನಗರದ ಶ್ರೀರಾಮ ಮಿತ್ರಕೂಟ ಭಜನಾ ಮಂಡಳಿ ಇವರ ಆಶಯದಲ್ಲಿ ಜನವರಿ 14ರಂದು ನಡೆಯಿತು.
ಭಾಸ್ಕರ್ ಶೆಟ್ಟಿಗಾರ್ ಸಂಘದ ಅಧ್ಯಕ್ಷತೆ ವಹಿಸಿದ್ದರು.ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭಾ ಕಾರ್ಯದರ್ಶಿ ತಿಮ್ಮಪ್ಪ ಶೆಟ್ಟಿಗಾರ್, ಶ್ರೀ ಸುಧಾಕರ ಶೆಟ್ಟಿಗಾರ್ ಇನ್ನಿತರರು ಉಪಸ್ಥಿತರಿದ್ದರು.
ಅಶೋಕ್ ಶೆಟ್ಟಿಗಾರ್ ಪ್ರಾರ್ಥಿಸಿದರು. ನಾಗರಾಜ್ ಶೆಟ್ಟಿಗಾರ್ ಕಾರ್ಯಕ್ರಮ ನಿರ್ವಹಿಸಿದರು. ರೇವತಿ ಶುಭಕರ್ ಶೆಟ್ಟಿಗಾರ್ ವರದಿ ವಾಚಿಸಿದರು. ಕೀರ್ತಿ ಶೆಟ್ಟಿಗಾರ್ ವಂದಿಸಿದರು.