ಇತರೆ

ಬಸ್ರೂರು ಬಿ.ಹೆಚ್ ಬಳಿ ಕಾರು- ಸ್ಕೂಟರ್ ಡಿಕ್ಕಿ: ಸವಾರರಿಬ್ಬರು ಸ್ಥಳದಲ್ಲೇ ಸಾವು

Views: 593

ಕನ್ನಡ ಕರಾವಳಿ ಸುದ್ದಿ:ಕಂಡ್ಲೂರು ಕಡೆಯಿಂದ ಕುಂದಾಪುರ ಕಡೆಗೆ ಅತಿವೇಗರಿಂದ ಬಂದ ಕಾರೊಂದು ಸ್ಕೂಟರ್ ಗೆ ಡಿಕ್ಕಿ ಹೊಡೆದು  ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ  ಬಸ್ರೂರು ಸಮೀಪದ ಬಿ.ಹೆಚ್.ಬಳಿ ಸಂಭವಿಸಿದೆ.

ಮೃತಪಟ್ಟ ಸ್ಕೂಟರ್ ಸವಾರರನ್ನು ಬಳ್ಕೂರಿನ ರಾಜೀವ ಶೆಟ್ಟಿ(50) ಹಾಗೂ ಸುಧೀರ್ ದೇವಾಡಿಗ(35) ಎಂದು ತಿಳಿದುಬಂದಿದೆ.

ಮಾ.28ರಂದು ಮದ್ಯಾಹ್ನ ಕಂಡ್ಲೂರು ಕಡೆಯಿಂದ ಕುಂದಾಪುರ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆ ಚಲಾಯಿಸಿಕೊಂಡು ಬಂದ ಮಾರುತಿ ಸಿಫ್ಟ್ ಕಾರೊಂದು ಬಸ್ರೂರಿನಿಂದ ಕಂಡ್ಲೂರು ಕಡೆಗೆ ಹೋಗುತ್ತಿದ ಸ್ಕೂಟರ್ ಗೆ ನೇರ ಡಿಕ್ಕಿಹೊಡೆದ ರಭಸಕ್ಕೆ ಸ್ಕೂಟರ್ ಸವಾರರಿಬ್ಬರು ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಕುಂದಾಪುರ ಪೊಲೀಸರು ಸ್ಥಳಕ್ಕಾಗಮಿಸಿ  ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

Related Articles

Back to top button