ಫೆ.11ಕ್ಕೆ ಸುರತ್ಕಲ್ ನಲ್ಲಿ ಪದ್ಮಶಾಲಿ ವಧು-ವರಾನ್ವೇಷಣಾ ಸಮಾವೇಶ

Views: 990
ಸಮಾಜ ಬಾಂಧವರೇ,
ಉತ್ತಮ ದಾಂಪತ್ಯ ಜೀವನಕ್ಕೆ ಪತಿ-ಪತ್ನಿಯರು ಅನ್ಯೋನ್ಯವಾಗಿರಬೇಕು. ಈ ನಿಟ್ಟಿನಲ್ಲಿ ಸಮಾಜವು ವಿವಾಹ ಅಪೇಕ್ಷಿತ ಯುವಕ- ಯುವತಿಯರನ್ನು ಹಾಗೂ ಅವರ ಕುಟುಂಬಿಕರನ್ನು ಒಂದೆಡೆ ಸೇರಿಸಿ ವಿಚಾರ ವಿನಿಮಯಕ್ಕೆ ಅವಕಾಶ ಮಾಡಿಕೊಟ್ಟಾಗ ಉತ್ತಮ ಸಂಬಂಧಗಳು ಕೂಡಿ ಬರಲು ಸಾಧ್ಯ.
ಸಮಾಜದಲ್ಲಿ ಮದುವೆಯ ವಯಸ್ಸಿಗೆ ಬಂದಿರುವ ಅನೇಕ ಯುವಕ- ಯುವತಿಯರಿದ್ದರೂ ಸರಿಯಾದ ಮಾಹಿತಿ ಮತ್ತು ಮಾರ್ಗದರ್ಶನದ ಕೊರತೆಯಿಂದಾಗಿ ಸೂಕ್ತ ಸಮಯದಲ್ಲಿ ವಿವಾಹವಾಗದೆ ಅನೇಕ ರೀತಿಯ ಯಾತನೆಗೆ ಒಳಗಾಗಿರುತ್ತಾರೆ ಮತ್ತು ಇವರು ಕೌಟುಂಬಿಕವಾಗಿ, ಸಾಮಾಜಿಕವಾಗಿ ಮತ್ತು ಮಾನಸಿಕವಾಗಿ ನೋವನ್ನು ಅನುಭವಿಸುತ್ತಿರುತ್ತಾರೆ.
ವಯಸ್ಸು ,ವಿದ್ಯಾರ್ಹತೆ, ಉದ್ಯೋಗ ಇನ್ನಿತರ ವಿಷಯಗಳಿಂದಾಗಿ ತಮ್ಮ ಅಪೇಕ್ಷೆಯ ವಧು- ವರಾ ನ್ವೇಷಣೆ ಫಲಕಾರಿಯಾಗದೆ ಇರುವುದರಿಂದ ಕೆಲವರಂತೂ ಕೌಟುಂಬಿಕ, ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳಿಂದ ದೂರ ಉಳಿದುಕೊಂಡು ವಿವಾಹದ ಕುರಿತು ನಿರಾಶ ಭಾವನೆ ಹೊಂದಿರುತ್ತಾರೆ.
ದಿನಾಂಕ 11-02-2024ರ ಭಾನುವಾರ ಬೆಳಗ್ಗೆ 9.00 ಗಂಟೆಗೆ ಸುರತ್ಕಲ್ ಶ್ರೀ ವೀರಭದ್ರ ದುರ್ಗಾಪರಮೇಶ್ವರಿ ಮತ್ತು ಶ್ರೀಪುರಾತನ ಮಾರಿಯಮ್ಮ ದೇವಸ್ಥಾನದ”ತ್ರೈರೂಪಿಣಿ ರಂಗ ಮಂಟಪ”ದಲ್ಲಿ ದೇವಸ್ಥಾನದ ನೇತೃತ್ವದಲ್ಲಿ ಉಭಯಸಂಘಗಳ ಸಹಯೋಗದೊಂದಿಗೆ “ಪದ್ಮಶಾಲಿ ವಧು-ವರಾನ್ವೇಷಣಾ ಸಮಾವೇಶ” ಜರಗಲಿರುವುದು.
ಕಾರ್ಯಕ್ರಮದಲ್ಲಿ ಎಲ್ಲ 15 ಶ್ರೀ ವೀರಭದ್ರ ದೇವಸ್ಥಾನಗಳ ಅಧ್ಯಕ್ಷರು/ ಪ್ರಧಾನ /ಆಡಳಿತ ಮೊಕ್ತೇಸರರು /ಗುರಿಕಾರರು / ಪ್ರತಿನಿಧಿಗಳು ತಮ್ಮ ಕೂಡುಕಟ್ಟಿನ ಮತ್ತು 12ವಲಯ ಸಂಘಟನೆಯ ಅಧ್ಯಕ್ಷರು ಪದಾಧಿಕಾರಿಗಳು ತಮ್ಮ ವಲಯ ವ್ಯಾಪ್ತಿಯೊಳಗೆ ಇರುವ ಅವಿವಾಹಿತ ವಧು -ವರರನ್ನು ಗುರುತಿಸಿ ಅವರನ್ನು ಈ ಸಮಾವೇಶದಲ್ಲಿ ಭಾಗವಹಿಸುವಂತೆ ಪ್ರೇರೇಪಿಸಬೇಕೆಂದೂ ತಾವೆಲ್ಲರೂ ತಪ್ಪದೇ ಉಪಸ್ಥಿತರಿದ್ದು, ಈ ಕಾರ್ಯಕ್ರವನ್ನು ಅತ್ಯಂತ ಯಶಸ್ವಿಗೊಳಿಸುವಂತೆ ಸಹಕರಿಸಬೇಕೆಂದು ವಿನಂತಿಸುತ್ತೇವೆ.
ದೇವಸ್ಥಾನದ ಆಡಳಿತ ಮಂಡಳಿ, ಸುರತ್ಕಲ್ ದೇವಸ್ಥಾನ
ಅಧ್ಯಕ್ಷರು/ಪದಾಧಿಕಾರಿಗಳು
ದ. ಕ.ಪದ್ಮಶಾಲಿ ಮಹಾಸಭಾ,ಮಂಗಳೂರು, ಮತ್ತು ವಿದ್ಯಾವರ್ಧಕ ಸಂಘ, ಉಡುಪಿ.
ಸಂಪರ್ಕ
9844328177/ 9480793437/ 9448887682 /7259608301