ಇತರೆ

ನವವಿವಾಹಿತೆ ಆತ್ಮಹತ್ಯೆಗೆ ಬಿಗ್ ಟ್ರಸ್ಟ್..! ಎದೆಯ ಮೇಲೆ ಹಾಕಿಸಿಕೊಂಡ ಪ್ರಿಯತಮನ ಹೆಸರಿನ ಹಚ್ಚೆ ಜೀವನ ಕೊನೆಯಾಯಿತೆ..!

Views: 151

ಕನ್ನಡ ಕರಾವಳಿ ಸುದ್ದಿ: ನವವಿವಾಹಿತೆಯ ಆತ್ಮಹತ್ಯೆ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಮೃತ ಮಹಿಳೆ ತನ್ನ ಎದೆಯ ಮೇಲೆ ಪ್ರಿಯತಮನ ಹೆಸರಿನ ಹಚ್ಚೆ (Tattoo) ಹಾಕಿಸಿಕೊಂಡಿದ್ದೇ ದಂಪತಿ ನಡುವಿನ ಕಲಹಕ್ಕೆ ಮತ್ತು ಅಂತಿಮವಾಗಿ ಆಕೆಯ ಸಾವಿಗೆ ಕಾರಣವಾಗಿದೆ ಎಂಬ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ.

ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಗ್ರಾಮದ ನಿವಾಸಿ ಪ್ರೇಮ, ಕಳೆದ ಹತ್ತು ತಿಂಗಳ ಹಿಂದಷ್ಟೇ ಶಿವಕುಮಾ‌ರ್ ಎಂಬುವವರನ್ನು ವಿವಾಹವಾಗಿದ್ದರು. ಮದುವೆಯಾಗಿ ಸುಖ ಸಂಸಾರ ನಡೆಸಬೇಕಿದ್ದ ಈ ದಂಪತಿ ನಡುವೆ ಕೇವಲ ಹತ್ತು ತಿಂಗಳಲ್ಲೇ ಬಿರುಕು ಮೂಡಿತ್ತು. ಇದಕ್ಕೆ ಕಾರಣವಾಗಿದ್ದು ಪ್ರೇಮ ತನ್ನ ಎದೆಯ ಮೇಲೆ ಹಾಕಿಸಿಕೊಂಡಿದ್ದ ಒಂದು ಹಚ್ಚೆ!

ವರದಿಗಳ ಪ್ರಕಾರ, ಮದುವೆಗೆ ಮುನ್ನವೇ ಪ್ರೇಮ ಬೇರೊಬ್ಬ ಯುವಕನನ್ನು ಗಾಢವಾಗಿ ಪ್ರೀತಿಸುತ್ತಿದ್ದರು. ತನ್ನ ಪ್ರೀತಿಯ ನೆನಪಿಗಾಗಿ ಆ ಪ್ರಿಯತಮನ ಹೆಸರನ್ನು ತನ್ನ ಎದೆಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದರು. ಮದುವೆಯ ನಂತರ ಈ ವಿಚಾರ ಗಂಡ ಶಿವಕುಮಾರ್‌ಗೆ ತಿಳಿದಿದೆ. ತನ್ನ ಹೆಂಡತಿಯ ಎದೆಯ ಮೇಲೆ ಬೇರೊಬ್ಬನ ಹೆಸರಿರುವುದನ್ನು ಕಂಡು ಶಿವಕುಮಾ‌ರ್ ತೀವ್ರ ಆಕ್ರೋಶಗೊಂಡಿದ್ದರು.

ಈ ಹಚ್ಚೆಯ ವಿಚಾರವಾಗಿ ಕಳೆದ ಕೆಲವು ತಿಂಗಳಿಂದ ದಂಪತಿ ನಡುವೆ ಪ್ರತಿನಿತ್ಯ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಗಂಡನ ನಿರಂತರ ಆಕ್ಷೇಪ ಮತ್ತು ಸಂಸಾರದಲ್ಲಿ ಉಂಟಾದ ಬಿರುಕಿನಿಂದ ಮನನೊಂದ ಪ್ರೇಮ, ಜಂಗಮಕೋಟೆ ಗ್ರಾಮದ ಗಂಡನ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮತ್ಯೆ ಮಾಡಿಕೊಂಡಿದ್ದಾರೆ.

ಘಟನೆ ನಡೆದ ಸ್ಥಳಕ್ಕೆ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯಕ್ಕೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸಾವಿಗೆ ನಿಖರ ಕಾರಣವೇನು ಮತ್ತು ಗಂಡನ ಮನೆಯವರಿಂದ ಏನಾದರೂ ಕಿರುಕುಳ ಇತ್ತೇ ಎಂಬ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಹತ್ತು ತಿಂಗಳ ಹಿಂದಷ್ಟೇ ಹಸೆಮಣೆ ಏರಿದ್ದ ಯುವತಿ ಹೀಗೆ ಹಚ್ಚೆ ವಿಚಾರಕ್ಕೆ ಜೀವನ ಕೊನೆಗಾಣಿಸಿಕೊಂಡಿರುವುದು ಗ್ರಾಮದಲ್ಲಿ ವಿಷಾದ ಮೂಡಿಸಿದೆ.

Related Articles

Back to top button
error: Content is protected !!