ಸಾಮಾಜಿಕ

ತಾಳಿ ಕಟ್ಟುವ ಶುಭ ವೇಳೆಗೆ ಮದುಮಗಳು ತೆಗೆದುಕೊಂಡ ನಿರ್ಧಾರಕ್ಕೆ ಕುಟುಂಬಸ್ಥರ ಕಣ್ಣೀರು!

Views: 212

ನಿಶ್ಚಯಿಸಿದ ವರನೊಂದಿಗೆ ಮಗಳನ್ನು ಧಾರೆ ಎರೆಯಲು ಮುಂದಾದ ಪೋಷಕರಿಗೆ ಮಗಳು ತೆಗೆದುಕೊಂಡ ನಿರ್ಧಾರ ತಿಳಿದು ಆಕಾಶವೇ ತಲೆಯ ಮೇಲೆ ಕುಸಿದಂತೆ ಆಗಿದೆ. ತಾಳಿ ಕಟ್ಟುವ ಶುಭ ಘಳಿಗೆಗೆ ಇನ್ನೇನು ಕೆಲವೇ ಕ್ಷಣಗಳು ಬಾಕಿ ಎನ್ನುವಾಗ ಆಕೆ ಮಾಡಿದ್ದನ್ನು ಮಾತ್ರ ಎರಡು ಕುಟುಂಬಸ್ಥರು ಮರೆಯಲಾಗದೆ ಕಣ್ಣೀರಿಟ್ಟಿದ್ದಾರೆ.

ಬ್ಯೂಟಿ ಪಾರ್ಲರ್‌ನಿಂದ ಮದುವೆ ಮಂಟಪಕ್ಕೆ ಬರಬೇಕಿದ್ದ ವಧು ತಾನು ಪ್ರೀತಿಸಿದ ಹುಡುಗನೊಂದಿಗೆ ಪರಾರಿಯಾದ ಘಟನೆ ಕಾನ್ಪರದಲ್ಲಿ ವರದಿಯಾಗಿದೆ.

ಯುವತಿಯ ಕುಟುಂಬಸ್ಥರು ಆಕೆ ಅನಾಮಧೇಯ ಯುವಕನನ್ನು ಪ್ರೀತಿಸಿದ್ದಳು ಎಂಬ ವಿಷಯವನ್ನು ಮುಂಚಿತವಾಗಿಯೇ ಅರಿತಿದ್ದರು. ಆದ್ರೆ, ಈ ಮದುವೆ ಅವರಿಗೆ ಸುತಾರಾಮ್​ ಇಷ್ಟವಿರಲಿಲ್ಲ. ಹೀಗಾಗಿ ಅನೇಕ ಬಾರಿ ಯುವತಿಗೆ ಬುದ್ಧಿ ಹೇಳಿ, ನಾವು ತೋರಿಸಿದ ಹುಡುಗನನ್ನೇ ನೀನು ಮದುವೆಯಾಗಬೇಕು ಎಂದು ಆಮಿಷ ಒಡ್ಡಿದ್ದರು.

ಆದ್ರೆ, ಯುವತಿ ಇದಕ್ಕೆ ಒಪ್ಪಿಲ್ಲ. ತಾವು ತೋರಿಸಿದ ವರನೊಂದಿಗೆ ನಿನ್ನ ಮದುವೆ ಎಂದ ಪೋಷಕರು, ತಮ್ಮ ಸಮುದಾಯದಲ್ಲಿ ಯಾರನ್ನಾದರೂ ಮದುವೆಯಾಗಲು ಬಯಸಿ, ಹುಡುಗನನ್ನು ನಿಶ್ಚಯಿಸಿದ್ದರು. ಈ ಬಗ್ಗೆ ಮಗಳು ಅಸಮಾಧಾನ ಹೊರಹಾಕಿದ್ದೇ ಆದರೂ ಕಡೆಯದಾಗಿ ಸುಮ್ಮನೆ ಮದುವೆಗೆ ಸಿದ್ಧವಾಗಿದ್ದಾಳೆ. ಘಟನೆಯನ್ನು ತನ್ನ ಪ್ರಿಯಕರನಿಗೆ ತಿಳಿಸಿದ ಯುವತಿ, ಆತನೊಂದಿಗೆ ವಿವಾಹಕ್ಕೆ ಇನ್ನೇನು ಕೆಲವೇ ಸಮಯ ಬಾಕಿ ಎನ್ನುವಷ್ಟರಲ್ಲಿ ಸ್ಥಳದಿಂದ ಕಾಲ್ಕಿತ್ತಿದ್ದಾಳೆ.

ಘಟನೆಯಿಂದ ಕಂಗಾಲಾದ ವಧುವಿನ ಮನೆಯವರು ಸದ್ಯ ಈ ಬಗ್ಗೆ ಹೆಚ್ಚು ಮಾತನಾಡಲು ಬಯಸಿಲ್ಲ. ಪ್ರಕರಣ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದು, ಯುವತಿಗಾಗಿ ಪೊಲೀಸರು ಹುಡಕಾಟ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ,

Related Articles

Back to top button