ಇತರೆ

ಡೆತ್ ನೋಟ್ ಬರೆದು ಪಿಯುಸಿ ವಿದ್ಯಾರ್ಥಿನಿ ನೇಣಿಗೆ ಶರಣು!

Views: 199

ಮುಲ್ಕಿ: ಡೆತ್ ನೋಟ್ ಬರೆದಿಟ್ಟು ವಿದ್ಯಾರ್ಥಿನಿ ನೇಣಿಗೆ ಶರಣಾಗಿರುವ ಘಟನೆ ಮುಲ್ಕಿ ಸಮೀಪದ ಅತಿಕಾರಿಬೆಟ್ಟು ರೈಲ್ವೆ ಗೇಟ್ ಬಳಿಯ ಕ್ವಾಟರ್ಸ್‌ನಲ್ಲಿ ನಡೆದಿದೆ.

ಕೊಂಕಣ ರೈಲ್ವೆ ಗೇಟ್ ಸಿಬ್ಬಂದಿ ಮಹೇಶ್ ನಾಯಕ್ ಎಂಬವರ ಪುತ್ರಿ ಉಜ್ವಲ (17) ಶನಿವಾರ (ಸೆ.28) ಸಂಜೆ ರೈಲ್ವೇ ಕ್ವಾಟರ್ಸ್‌ನ ಮನೆಯ ಎದುರು ಬದಿಯ ಕೋಣೆಯಲ್ಲಿ ಡೆತ್ ನೋಟ್ ಬರೆದಿಟ್ಟು ಪ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಉಜ್ವಲ ಮುಲ್ಕಿ ವಿಜಯ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದು, ಕಾಲೇಜಿನಲ್ಲಿ ನಡೆದ ಮೀಟಿಂಗ್ ಮುಗಿದ ಬಳಿಕ ಮನೆ ಕಡೆ ಬಂದಿದ್ದು, ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಏಕಾಏಕಿ ಈ ಕೃತ್ಯ ಎಸಗಿದ್ದಾಳೆ.

ಆತ್ಮಹತ್ಯೆ ಸಂದರ್ಭ ತಂದೆ ಮಹೇಶ್ ನಾಯಕ್ ಮೈಲೊಟ್ಟು ರೈಲ್ವೇ ಗೇಟ್ ಬಳಿ ಕರ್ತವ್ಯಕ್ಕೆ ಹೋಗಿದ್ದರು. ತಾಯಿ ತನ್ನ ಊರಾದ ಭಟ್ಕಳಕ್ಕೆ ತೆರಳಿದ್ದರು. ಮೃತಳ ಅಣ್ಣ ಮುಕ್ಕ ಕಾಲೇಜಿನಲ್ಲಿ ಕಲಿಯುತ್ತಿದ್ದು ಕಾಲೇಜು ಮುಗಿಸಿ ಸಂಜೆ 6:30 ಗಂಟೆ ಸುಮಾರಿಗೆ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.

ಮೃತಳ ರೂಮ್‌ನಲ್ಲಿದ್ದ ಡೆತ್ ನೋಟಲ್ಲಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಕೆಯ ಬಗ್ಗೆ ಬರೆದಿದ್ದಾಳೆ. ತೋಟದ ಮನೆಯಲ್ಲಿ ಅಂತಿಮ ಕ್ರಿಯೆ ನಡೆಯಬೇಕು ಎಂಬುವುದಾಗಿಯೂ ಉಲ್ಲೇಖಿಸಿದ್ದಾಳೆ.

ಮುಲ್ಕಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Related Articles

Back to top button
error: Content is protected !!