ಗಡಿ ಕಾಯೋ ಸೈನಿಕನ ಕೈ ಹಿಡಿದ ಗಿಣಿರಾಮ ಧಾರಾವಾಹಿ ನಟಿ ಕಾವೇರಿ

Views: 143
ಕಿರುತೆರೆಯ ಉತ್ತರ ಕರ್ನಾಟಕ ಶೈಲಿಯ ಗಿಣಿರಾಮ ಧಾರಾವಾಹಿ ಎಲ್ಲರ ಮೆಚ್ಚುಗೆ ಪಡೆದಿತ್ತು. ಗಿಣಿರಾಮ ಧಾರಾವಾಹಿಯ ನಾಯಕ ಶಿವರಾಮ್ ತಂಗಿ ಸೀಮಾ ಪಾತ್ರ ನಿಭಾಯಿಸಿದ್ದ ನಟಿ ಕಾವೇರಿ ಬಾಗಲಕೋಟೆ ಅವರು ಸಪ್ತಪದಿ ತುಳಿದಿದ್ದಾರೆ.
ಕಾವೇರಿ ಬಾಗಲಕೋಟೆ ಅವರು ವರಿಸಿರೋ ವರ ದೇಶದ ಗಡಿ ಕಾಯೋ ಸೈನಿಕ. ದೇಶದ ಹೆಮ್ಮೆಯ ಸೈನಿಕನನ್ನ ಪ್ರೀತಿಸಿ, ಎಲ್ಲರ ಒಪ್ಪಿಗೆ ಪಡೆದು, ಗುರು-ಹಿರಿಯರ ಸಮ್ಮುಖದಲ್ಲಿ ಹೊಸ ಜೀವನಕ್ಕೆ ಕಾಲಿರಿಸಿದ್ದಾರೆ.
ಹಲವು ವರ್ಷಗಳಿಂದ ಕಾವೇರಿ ಅವರು ವಿಠ್ಠಲ್ ಎಂಬುವರನ್ನು ಪ್ರೀತಿಸುತ್ತಿದ್ದರು. ಈಗ ಮನೆಯವರನ್ನ ಒಪ್ಪಿಸಿ ಇಬ್ಬರು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ.
ಇನ್ನೂ ಮದುವೆ ನಂತರದಲ್ಲಿ ಕಾವೇರಿ ಅವರು ಕಿರುತೆರೆಯಿಂದ ಕೊಂಚ ಬ್ರೇಕ್ ತೆಗೆದುಕೊಳ್ಳಲಿದ್ದಾರೆ. ಹಾಗಂತಾ ಪೂರ್ಣ ವಿರಾಮ ಹಾಕಿದ್ದಾರೆ ಅಂತಲ್ಲ. ಇದು ಅಲ್ಪ ವಿರಾಮವಷ್ಟೇ. ಕೆಲ ತಿಂಗಳ ನಂತರ ಮತ್ತೆ ಕಿರುತೆರೆಗೆ ಕಮ್‌ಬ್ಯಾಕ್ ಮಾಡಲಿದ್ದಾರೆ ಕಾವೇರಿ.
ಸದ್ಯ ಬಾಗಲಕೋಟೆಯಲ್ಲಿ ತಮ್ಮ ಸ್ವಂತ ಮೇಕಪ್ ಅಕಾಡೆಮಿಯನ್ನು ಓಪನ್ ಮಾಡಿರೋ ಕಾವೇರಿ, ತಮ್ಮ ವೈಯಕ್ತಿಕ ಜೀವನಕ್ಕೆ ಹೆಚ್ಚು ಸಮಯ ಮೀಸಲಿಡಲು ನಿರ್ಧರಿಸಿದ್ದಾರೆ.ಈ ಜೋಡಿಗೆ ಶುಭಾಶಯ ಕೋರಿದ್ದಾರೆ.