ಇತರೆ
ಕೋಟೇಶ್ವರ ಹಳೆ ಅಳಿವೆ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಡುತ್ತಿದ್ದ 10 ಮಂದಿ ವಿರುದ್ಧ ಪ್ರಕರಣ ದಾಖಲು

Views: 95
ಕನ್ನಡ ಕರಾವಳಿ ಸುದ್ದಿ: ಕೋಟೇಶ್ವರ ಎಂಕೋಡಿಯಿಂದ ಹಳೆ ಅಳಿವೆಗೆ ಹೋಗುವ ರಸ್ತೆಯ ಕೊಂಬಾರ ಎಂಬ ರೆಸಾರ್ಟ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಡುತ್ತಿದ್ದ 10 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಸ್ಥಳದಲ್ಲಿ ಆಟಕ್ಕೆ ಬಳಸಿದ 4,640 ರೂ., ಇತರ ಪರಿಕರಗಳು, 2 ಮೊಬೈಲ್ ಫೋನ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮಟ್ಕಾ ಜುಗಾರಿ ಅಡ್ಡೆಗೆ ದಾಳಿ ನಡೆಸಿದ ನಂಜಾ ನಾಯ್ಕ ಎನ್.ನೇತೃತ್ವದ ಕುಂದಾಪುರ ಪೊಲೀಸರ ತಂಡ ಆಟ ನಡೆಸುತ್ತಿದ್ದ ಸುರೇಶ ಎಂಬಾತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಮಟ್ಕಾ ಜುಗಾರಿ ಸಂಗ್ರಹಿಸಲು ಸಂದೇಶ ತಿಳಿಸಿದ್ದು ಉಳಿದವರು ಹಣ ಪಣವಾಗಿ ಇಟ್ಟು ಮಟ್ಕಾ ಜುಗಾರಿ ಆಟ ಆಡುತ್ತಿರುವುದಾಗಿ ತಿಳಿಸಿದ್ದಾನೆ.
ಆರೋಪಿಗಳಾದ ಸುರೇಶ ತೆಕ್ಕಟ್ಟೆ, ಸಂದೇಶ, ಶಂಕರ ಕುಂಭಾಶಿ, ಜಯರಾಮ್ ತೆಕ್ಕಟ್ಟೆ, ಶ್ರೀನಿವಾಸ ಕುಂಭಾಶಿ, ವಿನಾಯಕ ಕುಂಭಾಶಿ, ಗಣೇಶ್ ಸಾಲಿಗ್ರಾಮ, ರಾಜು ಕೋಟ, ರಾಜು ಕುಂಭಾಶಿ ಹಾಗೂ ಬಾಬು ತೆಕ್ಕಟ್ಟೆ ಎಂಬವರ ವಿರುದ್ಧ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.