ಇತರೆ
ಕುಂದಾಪುರ: ಬಸ್ರೂರು ಮನೆಯಲ್ಲಿ ಮಲಗಿದ ವ್ಯಕ್ತಿ ಬೆಳಿಗ್ಗೆ ನಾಪತ್ತೆ

Views: 273
ಕುಂದಾಪುರ: ಗುಲ್ವಾಡಿ ಗ್ರಾಮದ ಉಮೇಶ್ (50) ಅವರು ಮೇ 4ರಿಂದ ಕಾಣೆಯಾಗಿದ್ದಾರೆ.ಅವರು ಕಳೆದ 2-3 ದಿನಗಳಿಂದ ಮಾನಸಿಕ ಖಿನ್ನತೆಗೆ ಒಳಗಾದವರಂತೆ ವರ್ತಿಸುತ್ತಿದ್ದರು. ಬಸ್ರೂರು ಕೊಳ್ಳೆರೆಯಲ್ಲಿ ನಡೆದ ಕಾರ್ಯಕ್ರಮೊಂದರಲ್ಲಿ ಭಾಗವಹಿಸಿ ಮನೆಗೆ ಬಂದು ಮಲಗಿದ್ದು ಮರುದಿನ ಎದ್ದು ನೋಡುವಾಗ ಕಾಣೆಯಾಗಿದ್ದರು ಎಂದು ಅವರ ಪತ್ನಿ ಕುಸುಮ ದೂರು ನೀಡಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.