ಕುಂದಾಪುರ: ನೀರಿಗಾಗಿ ಪರದಾಡುತ್ತಿರುವ ಮೂಕ ಪ್ರಾಣಿಗಳಿಗೆ ಮಡಿಕೆಯಲ್ಲಿ ನೀರಿಡುವ ವ್ಯವಸ್ಥೆಗೆ ಚಾಲನೆ

Views: 63
ಕುಂದಾಪುರ:ಬಿಸಿಲಿನ ತಾಪದಿಂದಾಗಿ ಮನುಷ್ಯನಿಗಷ್ಟಲ್ಲದೇ ಪಕ್ಷಿಗಳಿಗೂ ನೀರಿನ ಕೊರತೆ ಉಂಟಾಗಿದೆ. ಈ ಬಿಸಿಲಿನ ತಾಪದಿಂದಾಗಿ ಅನೇಕ ಪಕ್ಷಿಗಳು ಪ್ರಾಣ ಕಳೆದುಕೊಳ್ಳುತ್ತಿದೆ. ಇದನ್ನು ಗಮನಿಸಿ ಕುಂದಾಪುರದ ಸಾಮಾಜಿಕ ಹೋರಾಟಗಾರರಾದ ಶಿವ ಕುಮಾರ್ ಮೆಂಡನ್ ನೇತೃತ್ವದಲ್ಲಿ, ಇಂದು ಬೆಳಿಗ್ಗೆ 6.00 ಗಂಟೆಯಿಂದ ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ “ಪಕ್ಷಿಗಾಗಿ ನೀರು” ಎನ್ನುವ ಕಾರ್ಯಕ್ರಮದ ಮೂಲಕ ಕುಂದಾಪುರ ಪುರಸಭಾ ವ್ಯಾಪ್ತಿಯ ಅನೇಕ ಕಡೆಗಳಲ್ಲಿ ಪಕ್ಷಿಗಳಿಗೆ ಪೋಟ್(ಮಡಿಕೆ) ಮೂಲಕ ನೀರಿಡುವ ವ್ಯವಸ್ಥೆ ಮಾಡಲಾಯಿತು.
ಈ ಕಾರ್ಯಕ್ರಮಕ್ಕೆ ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ಅದ್ಯಕ್ಷರಾದ ಕಿಶೋರ್ ಕುಮಾರ್ ಚಾಲನೆ ನೀಡಿದರು.
ಅವರು ಮಾತನಾಡುತ್ತಾ ನೀರನ್ನು ಮಿತವಾಗಿ ಬಳಸುವುದು ಮತ್ತು ದುರ್ಬಳಕೆ ಮಾಡಬಾರದು . ಬೇಸಿಗೆಯಲ್ಲಿ ಪ್ರಾಣಿ, ಪಕ್ಷಿಗಳು ನೀರಿಲ್ಲದೆ ಬಳಲುತ್ತಿರುವುದು ನಾವು ನೋಡುತ್ತಿದ್ದೇವೆ. ಸಾರ್ವಜನಿಕರಲ್ಲಿ ನನ್ನ ವಿನಂತಿ ಇಷ್ಡೆ ತಮ್ಮ ತಮ್ಮ ಮನೆಗಳ ಎದುರು, ಮನೆಯ ಮೇಲ್ಗಡೆ ಪ್ರತೀ ನಿತ್ಯವೂ ಒಂದು ಬಕೆಟ್ ನೀರು ಇಟ್ಟು, ಪಕ್ಷಿಗಳು ಕುಡಿಯಲಿ ಇದರಿಂದ ಪಕ್ಷಿಗಳನ್ನು ರಕ್ಷಿಸೋಣ ಎಂದರು.
ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ರಘುವೀರ್ ನಗರ್ಕರ್, ರಾಜೇಶ್ ಕಾವೇರಿ, ಪ್ರಭಾಕರ್ ವಿ,ಜೋಯ್ ಕರ್ವೆಲ್ಲೊ, ರಾಜು ಪೂಜಾರಿ,ಸೀತಾರಾಮ್, ಮಠದ ಬೆಟ್ಟು ರಾಜು,ಸ್ವಾಮಿ ಪ್ರಸಾದ್, ವಿಕಾಸ್ ಹೆಗಡೆ , ಗಣೇಶ್ ಮೆಂಡನ್, ಮಹೇಶ್ ಶೆಟ್ಟಿ, ಪುರಸಭೆ ಸದಸ್ಯ ಶ್ರೀಕಾಂತ್, ಸ್ವಾಮಿ ಪ್ರಸಾದ್, ಪ್ರಮೋದ್ ಶ್ರೀಯಾನ್, ಚಂದ್ರ ಬೂದ, ಅನಿಲ್ ಉಪ್ಪೂರ್ ಮತ್ತಿತರರು ಉಪಸ್ಥಿತರಿದ್ದರು.