ಇತರೆ

ಕುಂದಾಪುರ:ವಕ್ವಾಡಿಯಲ್ಲಿ ಅನಾರೋಗ್ಯ ಪೀಡಿತ ಮಹಿಳೆ ಆತ್ಮಹತ್ಯೆ 

Views: 236

ಕನ್ನಡ ಕರಾವಳಿ ಸುದ್ದಿ: ಅನಾರೋಗ್ಯ ಪೀಡಿತ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಾಪುರ ತಾಲೂಕಿನ ವಕ್ವಾಡಿಯಲ್ಲಿ ನಡೆದಿದೆ.

ವಕ್ವಾಡಿ ಗ್ರಾಮದ ಗುಡಾರ್‌ಮಕ್ಕಿ ನಿವಾಸಿ ಬೇಬಿ ಶೆಡ್ತಿ (65) ಆತ್ಮಹತ್ಯೆ ಮಾಡಿಕೊಂಡವರು.

ಕಳೆದ ಕೆಲವು ದಿನಗಳಿಂದ ಅಧಿಕ ರಕ್ತದೊತ್ತಡ, ಕಾಲು ಗಂಟುನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಖಿನ್ನಿತರಾಗಿ ಮನೆಯ ಹತ್ತಿರದ ದಿನದ ಕೊಟ್ಟಿಗೆಯ ಮಾಡಿನ ಪಕ್ಕಾಸಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಮೃತರ ಸಹೋದರ ವಿ.ನಾರಾಯಣ ಶೆಟ್ಟಿ  ನೀಡಿದ ದೂರಿನಂತೆ ತುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button