ಜನಮನ

ಕುಂದಾಪುರ:ಇಂದು, ನಾಳೆ ಈ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ

Views: 160

ಕನ್ನಡ ಕರಾವಳಿ ಸುದ್ದಿ: ಬಿದ್ಕಲ್ ಕಟ್ಟೆ ಮತ್ತು ವಾರಾಹಿ 11 ಕೆ.ವಿ. ಫೀಡರಿನ ಮಾರ್ಗಗಳ ವ್ಯಾಪ್ತಿಯ ಪ್ರದೇಶಗಳಲ್ಲಿ ಮೇ 6ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಬೆಳಿಗ್ಗೆ 9.30ರಿಂದ ಸಂಜೆ 5.30ರ ವರೆಗೆ ಈ ಫೀಡರಿನ ಮಾರ್ಗಗಳಲ್ಲಿ ಪಾಲನಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಬಿದ್ಕಲ್ ಕಟ್ಟೆ ಮೊಳಹಳ್ಳಿ ಸೌಡ, ಹಾರ್ದಳ್ಳಿ-ಮಂಡಳ್ಳಿ ಯಡಾಡಿ-ಮತ್ಯಾಡಿ, ಭರತ್‌ಕಲ್ಲು ಕುಳುಂಜೆ ಮತ್ತುಹೊಸಬಾಳು ಗ್ರಾಮಗಳ ಸುತ್ತಮುತ್ತ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಮಾಡಲಾಗುತ್ತದೆ.

ಮೇ.7ರಂದು  ಮಧುವನ 110/11ಕೆವಿ ಉಪಕೇಂದ್ರದಿಂದ ಹೊರಡುವ ಬಾರ್ಕೂರು ಎಕ್ಸ್‌ ಪ್ರೆಸ್ ಫೀಡರ್ ಮಾರ್ಗದಲ್ಲಿ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಬೆಳಗ್ಗೆ 9.30 ರಿಂದ ಸಂಜೆ 5.30 ವರೆಗೆ ಈ ಫೀಡರ್ ಮಾರ್ಗದಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಹೊಸಾಳ, ಕಳ್ಳೂರು, ರಂಗನಕೇರಿ, ಹೇರಾಡಿ, ಹನೆಹಳ್ಳಿ ಕೂರಾಡಿ, ನಡೂರು, ಪಡುನೀಲಾವರ, ಬೆಣ್ಣೆಕುದ್ರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

Related Articles

Back to top button
error: Content is protected !!