ಇತರೆ
ಆಟ ಆಡುತ್ತಿರುವ ಇಬ್ಬರು ಬಾಲಕಿಯರನ್ನು ಮನೆಯೊಳಗೆ ಎಳೆದೊಯ್ದು 5 ದಿನ ನಿರಂತರ ಅತ್ಯಾಚಾರ: ಆರೋಪಿ ಬಂಧನ
Views: 178
ಕನ್ನಡ ಕರಾವಳಿ ಸುದ್ದಿ: ಮನೆಯೊಂದರಲ್ಲಿ ಇಬ್ಬರು ಅಪ್ರಾಪ್ತಯರ ಮೇಲೆ 5 ದಿನ ನಿರಂತರ ಅತ್ಯಾಚಾರ ನಡೆದ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ನಡೆದಿದ್ದು, ಈ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಜೂ.10 ರಂದು ಸಂಜೆ 4.30ರ ಸುಮಾರು ಬಾಲಕಿಯರು ಶಾಲೆ ಮುಗಿಸಿ ಮರಳಿ ಮನೆಯ ಮುಂದೆ ಕಬಡ್ಡಿ ಆಟ ಆಡುತ್ತಿರುವ ಸಮಯದಲ್ಲಿ ಬಾಬುಸಾಬ್ ಖಾದರ್ಸಾಬ (44) ಎಂಬ ವ್ಯಕ್ತಿ ಇಬ್ಬರು ಬಾಲಕಿಯರನ್ನು ಮನೆಯೊಳಗೆ ಎಳೆದೊಯ್ದು ಅತ್ಯಾಚಾರ ಮಾಡಿದ್ದಾನೆ. ತದನಂತರ ಐದು ದಿನ ಅದೇ ರೀತಿ ನಿರಂತರ ಅತ್ಯಾಚಾರ ಎಸಗಿದ್ದಾನೆ. ನಡೆದ ಘಟನೆಯನ್ನು ಯಾರಿಗಾದರೂ ಹೇಳಿದರೆ ನಿಮ್ಮ ತಂದೆ-ತಾಯಿಯನ್ನು ಕೊಲೆ ಮಾಡುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದ. ಆದ್ದರಿಂದ ತಡವಾಗಿ ದೂರು ದಾಖಲಿಸಿರುವುದಾಗಿ ನೊಂದ ಬಾಲಕಿಯರ ತಂದೆ ದೂರು ನೀಡಿದ್ದು, ಪೋಕ್ಲೋ ಕಾಯ್ದೆಯಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಬಂಧಿಸಿದ್ದಾರೆ.






