ಬಿದ್ಕಲ್ಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್: ಕ್ಲಸ್ಟರ್ ಮಟ್ಟದ ಸೃಜನಾತ್ಮಕ ಬರವಣಿಗೆ ಸ್ಪರ್ಧೆ
Views: 55
ಕನ್ನಡ ಕರಾವಳಿ ಸುದ್ದಿ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸಮಗ್ರ ಶಿಕ್ಷಣ ಅಭಿಯಾನ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕುಂದಾಪುರ, ಕ್ಷೇತ್ರ ಸಂಪನ್ಮೂಲ ಕೇಂದ್ರ ಕುಂದಾಪುರ ಮತ್ತು ಸಮೂಹ ಸಂಪನ್ಮೂಲ ಕೇಂದ್ರ ಇವರ ಸಹಭಾಗಿತ್ವದಲ್ಲಿ ಸಾಹಿತ್ಯ ಕ್ಲಬ್ ವತಿಯಿಂದ ಕುಂದಾಪುರ ವಲಯದ ಬಿದ್ಕಲ್ ಕಟ್ಟೆ ಕ್ಲಸ್ಟರ್ ಮಟ್ಟದ ಸೃಜನಾತ್ಮಕ ಬರವಣಿಗೆ ಸ್ಪರ್ಧೆಯು ಕರ್ನಾಟಕ ಪಬ್ಲಿಕ್ ಸ್ಕೂಲ್ ಬಿದ್ಕಲ್ ಕಟ್ಟೆಯ ಪ್ರಾಥಮಿಕ ವಿಭಾಗದಲ್ಲಿ ನಡೆಯಿತು.

ಶಾಲಾ ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾದ ಶ್ರೀ ಗೌತಮ್ ಶೆಟ್ಟಿ ಅವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿ ಸಂಘದ ಕೋಶಾಧಿಕಾರಿ ಶ್ರೀ ದಿವಾಕರ ಆಚಾರ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಸುಕನ್ಯ, ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀ ಸತೀಶ್ ಎಚ್ ಆರ್, ಹಿರಿಯ ಮುಖ್ಯ ಶಿಕ್ಷಕರಾದ ಶ್ರೀಮತಿ ಉಷಾ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಸುಕನ್ಯ ಸೃಜನಶೀಲ ಬರವಣಿಗೆಯ ಸ್ಪರ್ಧೆಯ ರೂಪರೇಷೆಗಳನ್ನು ಸವಿಸ್ತಾರವಾಗಿ ತಿಳಿಸಿದರು. ಭವಿಷ್ಯದ ಸಾಹಿತಿಗಳನ್ನು ರೂಪಿಸುವ ಮಹತ್ವದ ಉದ್ದೇಶದೊಂದಿಗೆ ಪ್ರಪ್ರಥಮವಾಗಿ ಇಲಾಖೆ ಮಟ್ಟದಲ್ಲಿ ಈ ಸ್ಪರ್ಧೆ ಆಯೋಜನೆಗೊಂಡಿದ್ದು, ಸ್ಪರ್ಧೆಯಲ್ಲಿ ಭಾಗವಹಿಸಲು ಆಗಮಿಸಿರುವ ಎಲ್ಲ ಮಕ್ಕಳಿಗೂ ಶುಭಾಶಯ ಕೋರಿದರು.
ಶಾಲಾ ಹಿರಿಯ ಮುಖ್ಯ ಶಿಕ್ಷಕರಾದ ಶ್ರೀಮತಿ ಉಷಾ ಇವರು ಮಾತನಾಡಿ, ಸಾಹಿತ್ಯ ಕ್ಲಬ್ ಚಟುವಟಿಕೆಯಾಗಿ ಹಮ್ಮಿಕೊಂಡಿರುವ ಸೃಜನಾತ್ಮಕ ಬರವಣಿಗೆ ಸ್ಪರ್ಧೆಯು ವಿದ್ಯಾರ್ಥಿಗಳಲ್ಲಿ ಸೃಜನಾತ್ಮಕ ಕೌಶಲವನ್ನು ಬೆಳೆಸುವ ಮೂಲಕ ಭವಿಷ್ಯದ ಸಾಹಿತಿಗಳನ್ನು ರೂಪಿಸುವ ಮಹತ್ವದ ಉದ್ದೇಶ ಹೊಂದಿರುವುದರಿಂದ ಇದಕ್ಕೆ ಪೂರ್ವ ತಯಾರಿಗಾಗಿ ಮಕ್ಕಳಿಗೆ ಸಾಕಷ್ಟು ಸಮಯ ಬೇಕಾಗುತ್ತದೆ. ಆದಾಗ್ಯೂ ಇರುವ ಕಡಿಮೆ ಸಮಯದಲ್ಲಿ ಅತ್ಯುತ್ತಮ ತಯಾರಿಯೊಂದಿಗೆ ಆಗಮಿಸಿರುವ ಎಲ್ಲಾ ಸ್ಪರ್ಧಾಳುಗಳಿಗೆ ಶುಭ ಕೋರಿದರು.
ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀ ಸತೀಶ್ ಎಚ್ಆರ್ ಮಕ್ಕಳಿಗೆ ಸೃಜನಾತ್ಮಕ ಬರವಣಿಗೆ ಸ್ಪರ್ಧೆಯ ಬಗ್ಗೆ ಮಾಹಿತಿ ನೀಡಿದರು.
ಪ್ರಾರಂಭದಲ್ಲಿ ಶಾಲಾ ಹಿರಿಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಉಷಾ ಎಲ್ಲರನ್ನೂ ಸ್ವಾಗತಿಸಿದರೆ, ಕೊನೆಯಲ್ಲಿ ಸಿ ಆರ್ ಪಿ ಸತೀಶ್ ಎಚ್ಆರ್ ವಂದಿಸಿದರು. ಸಹ ಶಿಕ್ಷಕ ಸತೀಶ್ ಶೆಟ್ಟಿಗಾರ್ ಕಾರ್ಯಕ್ರಮ ನಿರ್ವಹಿಸಿದರು.
ಬಿದ್ಕಲ್ ಕಟ್ಟೆ ಕ್ಲಸ್ಟರ್ ಹಂತದ ಬರವಣಿಗೆ ಸ್ಪರ್ಧೆಯ ಫಲಿತಾಂಶ ವಿವರ ಇಂತಿದೆ.
ಕವನ ರಚನೆ
ಪ್ರಥಮ – ಕೀರ್ತಿ ಶೆಟ್ಟಿ, ಕೆಪಿಎಸ್ ಬಿದ್ಕಲ್ ಕಟ್ಟೆ
ದ್ವಿತೀಯ -ತನ್ವಿ, ಹಾರ್ದಳ್ಳಿ ಮಂಡಳ್ಳಿ
ತೃತೀಯ -ತೃಪ್ತಿ ಶೆಟ್ಟಿ ಮೊಳಹಳ್ಳಿ
ಪ್ರಬಂಧ ರಚನೆ
ಪ್ರಥಮ- ನಯನ ಹಾರ್ದಳ್ಳಿ ಮಂಡಳ್ಳಿ
ದ್ವಿತೀಯ -ಮನ್ವಿತ್ ಶೆಟ್ಟಿ ಕೆಪಿಎಸ್ ಬಿದ್ಕಲ್ ಕಟ್ಟೆ
ತೃತೀಯ -ಸಾನ್ವಿಕ ಮೊಳಹಳ್ಳಿ
ಕಥಾ ರಚನೆ
ಪ್ರಥಮ- ನಾಗರತ್ನ, ಕೆಪಿಎಸ್ ಬಿದ್ಕಲ್ ಕಟ್ಟೆ
ದ್ವಿತೀಯ-ಮಾನ್ವಿ ಪಿ ಕಾಂಚನ್, ಸೌಡ
ತೃತೀಯ-ಅಕ್ಷಯ, ಹಾರ್ದಳ್ಳಿ ಮಂಡಳ್ಳಿ
ಈ ಎಲ್ಲ ವಿದ್ಯಾರ್ಥಿಗಳಲ್ಲಿ, ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ಮಾತ್ರ ಸೋಮವಾರ ಸಿದ್ದಾಪುರದಲ್ಲಿ ನಡೆಯುವ ತಾಲೂಕು ಹಂತದ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿರುತ್ತದೆ.










