ಇತರೆ

ಬಿಸ್ಲೆರಿಗೆ ಎರಡನೇ ಮಾದರಿಯಲ್ಲೂ ಕೋಲಿಫಾರ್ಮ್ ಬ್ಯಾಕ್ಟೀರಿಯಾ ಪತ್ತೆ; ಕಾನೂನು ಕ್ರಮಕ್ಕೆ FSSAI

Views: 27

ಕನ್ನಡ ಕರಾವಳಿ ಸುದ್ದಿ: ಪ್ಯಾಕೇಜ್ಡ್ ಕುಡಿಯುವ ನೀರಿನ ಬ್ರ್ಯಾಂಡ್ ಬಿಸ್ಲೆರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಕಂಪನಿಯ ಪಶ್ಚಿಮ ಬಂಗಾಳದ ಘಟಕದಿಂದ ಸಂಗ್ರಹಿಸಲಾದ ಕುಡಿಯುವ ನೀರಿನ ಮಾದರಿಯಲ್ಲಿ ಕೋಲಿಫಾರ್ಮ್ ಬ್ಯಾಕ್ಟೀರಿಯಾ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಕಂಪನಿ ವಿರುದ್ಧ ಕಾನೂನು ಕ್ರಮಕ್ಕೆ ಅನುಮೋದನೆ ನೀಡಿದೆ. ಇದು ಒಂದು ವಾರದೊಳಗೆ ಬಿಸ್ಲೆರಿ ವಿರುದ್ಧ ಕೈಗೊಂಡ ಎರಡನೇ ಕಾನೂನು ಕ್ರಮವಾಗಿದೆ.

ಪಶ್ಚಿಮ ಬಂಗಾಳದ ಜಲಪೈಗುರಿ ಜಿಲ್ಲೆಯ ತೆಲಿಪಾರಾ ಗ್ರಾಮದಲ್ಲಿರುವ ಬಿಸ್ಲೆರಿ ಉತ್ಪಾದನಾ ಘಟಕದಿಂದ ನೀರಿನ ಮಾದರಿಯನ್ನು ಸಂಗ್ರಹಿಸಲಾಗಿತ್ತು. ಪ್ರಾಥಮಿಕ ಪ್ರಯೋಗಾಲಯದ ಪರೀಕ್ಷೆಯಲ್ಲಿ ಕೋಲಿಫಾರ್ಮ್ ಬ್ಯಾಕ್ಟೀರಿಯಾ ಪತ್ತೆಯಾಗಿತ್ತು. ಬಳಿಕ ಮರುಪರಿಶೀಲನೆಗಾಗಿ ಕಳುಹಿಸಲಾದ ರೆಫರಲ್ ಪ್ರಯೋಗಾಲಯವೂ ಬ್ಯಾಕ್ಟೀರಿಯಾ ಇರುವುದನ್ನು ದೃಢಪಡಿಸಿದೆ.

ಈ ಮಾದರಿಯು PB 201 ಬ್ಯಾಚ್‌ಗೆ ಸೇರಿದ್ದು, ಈ ಬ್ಯಾಚ್‌ನ ಮಾರಾಟವನ್ನು ಆಗಸ್ಟ್ 12, 2026ರಂದು FSSAI ನಿಷೇಧಿಸಿತ್ತು. ಇದೀಗ ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ ಆರೋಪದಡಿ ಕಂಪನಿ ವಿರುದ್ಧ ಕಾನೂನು ಕ್ರಮಕ್ಕೆ ಅನುಮೋದನೆ ನೀಡಲಾಗಿದೆ.

ಗೋವಾ ಘಟಕದ ಪ್ರಕರಣವೂ ಬಾಕಿ

ಇದಕ್ಕೂ ಮೊದಲು ಗೋವಾದಲ್ಲಿರುವ ಬಿಸ್ಲೆರಿ ಘಟಕದಿಂದ ಸಂಗ್ರಹಿಸಿದ ನೀರಿನ ಮಾದರಿಯಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಬ್ರೋಮೇಟ್ ಅಂಶ ಪತ್ತೆಯಾಗಿತ್ತು. ನಂತರದ ಪರೀಕ್ಷೆಯಲ್ಲಿ PAH ಅಂಶವೂ ವರದಿಯಾಗಿತ್ತು. ಈ ಪ್ರಕರಣದಲ್ಲಿಯೂ FSSAI ಕಾನೂನು ಕ್ರಮಕ್ಕೆ ಮುಂದಾಗಿದೆ.

ಬಿಸ್ಲೆರಿ ಹೇಳಿದ್ದೇನು?

ಪಶ್ಚಿಮ ಬಂಗಾಳದ PB 201 ಬ್ಯಾಚ್‌ನ ಮಾರಾಟವನ್ನು ಈಗಾಗಲೇ ಸ್ಥಗಿತಗೊಳಿಸಿ, ಮರುಪಡೆಯಲಾಗಿದೆ ಎಂದು ಬಿಸ್ಲೆರಿ ತಿಳಿಸಿದೆ. ಕಂಪನಿಯು ಸ್ವತಂತ್ರ ಪ್ರಯೋಗಾಲಯಗಳಲ್ಲಿ ನಡೆಸಿದ ಪರೀಕ್ಷೆಗಳಲ್ಲಿ ಮಾದರಿಗಳು ನಿಗದಿತ ಗುಣಮಟ್ಟದ ಮಾನದಂಡಗಳನ್ನು ಪೂರೈಸಿವೆ ಎಂದು ಹೇಳಿಕೊಂಡಿದೆ. ಪ್ರಯೋಗಾಲಯಗಳ ವರದಿಗಳಲ್ಲಿನ ವ್ಯತ್ಯಾಸದ ಹಿನ್ನೆಲೆಯಲ್ಲಿ ಪರೀಕ್ಷಾ ವಿಧಾನ ಮತ್ತು ಮಾದರಿ ಸಂಗ್ರಹ ಪ್ರಕ್ರಿಯೆಯನ್ನು ಪರಿಶೀಲಿಸುವಂತೆ FSSAIಗೆ ಮನವಿ ಮಾಡಿದೆ.

ಈ ಪ್ರಕರಣದಲ್ಲಿ ನಿಯಂತ್ರಕ ಸಂಸ್ಥೆಯ ವರದಿ ಮತ್ತು ಕಂಪನಿಯ ಸ್ವತಂತ್ರ ಪರೀಕ್ಷಾ ವರದಿಗಳ ನಡುವೆ ವ್ಯತ್ಯಾಸವಿದ್ದು, ಮುಂದಿನ ಕಾನೂನು ಪ್ರಕ್ರಿಯೆಯಲ್ಲಿ ಈ ಅಂಶಗಳು ಮಹತ್ವ ಪಡೆಯಲಿವೆ

Related Articles

Back to top button
error: Content is protected !!