ಜನಮನ

ಕುಂದಾಪುರ ರೈಲು ಪ್ರಯಾಣಿಕರಿಗೆ ಶುಭ ಸುದ್ದಿ!..ಎರಡು ಪ್ರಮುಖ ಎಕ್ಸ್‌ಪ್ರೆಸ್ ರೈಲುಗಳಿಗೆ ನಿಲುಗಡೆ

Views: 64

ಕನ್ನಡ ಕರಾವಳಿ ಸುದ್ದಿ: ಮೂಡ್ಲಕಟ್ಟೆಯ ರೈಲು ನಿಲ್ದಾಣದಲ್ಲಿ ಹೊಸದಾಗಿ ಇನ್ನೆರಡು ರೈಲುಗಳ ನಿಲುಗಡೆಗೆ ರೈಲ್ವೇ ಸಚಿವಾಲಯ ಅವಕಾಶ ಕಲ್ಪಿಸಿದೆ.

ತಿರುವನಂತಪುರಂ – ಅಮೃತಸರ ಎಕ್ಸ್‌ಪ್ರೆಸ್ ರೈಲು (12483/ 12484 ಹಾಗೂ ತಿರುವನಂತಪುರಂ ಯೋಗನಗರ ರಿಷಿಕೇಶ್ (22659) 22660) ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆಗೆ ಅವಕಾಶ ನೀಡುವಂತೆ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಒತ್ತಾಯಿಸಿದ್ದರು. ಅದಕ್ಕೀಗ ರೈಲ್ವೇ ಸಚಿವಾಲಯ ಒಪ್ಪಿಗೆ ನೀಡಿದೆ.

ಇದರಿಂದ ಕುಂದಾಪುರ ಭಾಗದ ರೈಲು ಪ್ರಯಾಣಿಕರಿಗೆ ಮುಂಬಯಿ, ಹರಿದ್ವಾರ, ಬದರಿನಾಥ ಭಾಗಕ್ಕೆ ತೆರಳಲು, ಆ ಭಾಗದವರಿಗೆ ಕೊಲ್ಲೂರಿಗೆ ಬರಲು ಅನುಕೂಲ ಆಗಲಿದೆ.

ಉತ್ತರ ಭಾರತಕ್ಕೆ ನೇರ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಈ ಎರಡು ಪ್ರಮುಖ ಎಕ್ಸ್‌ಪ್ರೆಸ್ ರೈಲುಗಳಿಗೆ ಕುಂದಾಪುರದಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.

ಕುಂದಾಪುರ ಹಾಗೂ ಸುತ್ತಮುತ್ತಲಿನ ಉಡುಪಿ ಜಿಲ್ಲೆಯ ಪ್ರಯಾಣಿಕರಿಗೆ ಪಂಜಾಬ್, ದೆಹಲಿ ಮತ್ತು ಉತ್ತರಾಖಂಡದಂತಹ ಉತ್ತರ ಭಾರತದ ಪ್ರಮುಖ ನಗರಗಳಿಗೆ ಹಾಗೂ ತೀರ್ಥಕ್ಷೇತ್ರಗಳಿಗೆ ನೇರವಾಗಿ ಪ್ರಯಾಣಿಸಲು ಇದು ಸಹಾಯಕವಾಗಲಿದೆ.

Related Articles

Back to top button
error: Content is protected !!