ರಾಜಕೀಯ

ಹಳೆಯ ಮತದಾರರ ಪಟ್ಟಿಯಡಿ ಗ್ರಾಮ ಪಂಚಾಯತ್ ಚುನಾವಣೆ?

Views: 11

ಕನ್ನಡ ಕರಾವಳಿ ಸುದ್ದಿ: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆಗೆ ಎಸ್‌ಐಆ‌ರ್ ಗೂ ಮೊದಲಿನ ಹಳೆಯ ಮತದಾರರ ಪಟ್ಟಿಯನ್ನೇ ಬಳಸಲು ಅನುಮತಿ ನೀಡುವಂತೆ ಕರ್ನಾಟಕ ರಾಜ್ಯ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.

ಎಸ್‌ಐಆ‌ರ್ ಬಳಿಕದ ಸಂಪೂರ್ಣ ಮತದಾರರ ಮಾಹಿತಿ ಇನ್ನೂ ಲಭ್ಯವಾಗದಿರುವ ಹಿನ್ನೆಲೆಯಲ್ಲಿ, 2026ರ ಏಪ್ರಿಲ್ 18ರಂದು ಪ್ರಕಟವಾದ ಅಂತಿಮ ಮತದಾರರ ಪಟ್ಟಿಯ ಆಧಾರದಲ್ಲಿ ಚುನಾವಣೆ ನಡೆಸಲು ಅವಕಾಶ ನೀಡುವಂತೆ ಆಯೋಗ ಮನವಿ ಮಾಡಿದೆ. ಐದು ನಗರ ಪಾಲಿಕೆಗಳ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಲು 2027ರ ಜನವರಿ 31ರವರೆಗೆ ಕಾಲಾವಕಾಶ ವಿಸ್ತರಿಸುವಂತೆಯೂ ರಾಜ್ಯ ಚುನಾವಣಾ ಆಯೋಗ ಅರ್ಜಿ ಸಲ್ಲಿಸಿದೆ. ಈ ಹಿಂದೆ ಸುಪ್ರೀಂ ಕೋರ್ಟ್ ಜುಲೈ 17ರಂದು ಐದು ನಗರ ಪಾಲಿಕೆಗಳ ಚುನಾವಣೆಯನ್ನು 2026ರ ಡಿಸೆಂಬರ್ 31ರೊಳಗೆ ಪೂರ್ಣ ಗೊಳಿಸುವಂತೆ ನಿರ್ದೇಶಿಸಿತ್ತು.

ಚುನಾವಣಾ ಆಯೋಗದ ವಾದವೇನು?

ಎಸ್ಐಆರ್ ಬಳಿಕ ಅಕ್ಟೋಬರ್ 27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಿದ್ದರೂ, ಸೇರ್ಪಡೆ, ಹೆಸರು ತೆಗೆದುಹಾಕುವಿಕೆ, ವರ್ಗಾವಣೆ ಹಾಗೂ ತಿದ್ದುಪಡಿಗಳನ್ನು ಒಳಗೊಂಡ ಸಂಪೂರ್ಣ ದೃಢೀಕೃತ ಡೇಟಾವನ್ನು ಚುನಾವಣಾ ಆಯೋಗಕ್ಕೆ ಇನ್ನೂ ಒದಗಿಸಲಾಗಿಲ್ಲ ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ. ಕೇವಲ ಅಂತಿಮ ಪಟ್ಟಿ ಪ್ರಕಟವಾದರೆ ಸಾಕಾಗುವುದಿಲ್ಲ, ವಾರ್ಡ್ ವಾರು, ವಿಭಾಗ, ಮ್ಯಾಪಿಂಗ್, ಪರಿಶೀಲನೆ ಮತ್ತು ಮತದಾರರ ಪಟ್ಟಿಯ ಪ್ರಕಟಣೆ, ಸಂಪೂರ್ಣ ಬಳಕೆಗೆ ಯೋಗ್ಯವಾದ ಡೇಟಾ ಅಗತ್ಯ ಎಂದು ವಾದಿಸಿದೆ. ಹೊಸ ಮತದಾರರ ಡೇಟಾ ಲಭ್ಯವಾಗುವವರೆಗೆ ಕಾಯಬೇಕಾದರೆ, ವಾರ್ಡ್‌ವಾರು ಪಟ್ಟಿಗಳನ್ನು ಸಿದ್ಧಪಡಿಸಲು ಕನಿಷ್ಠ ಎರಡು ತಿಂಗಳು ಮತ್ತು ಚುನಾವಣೆ ನಡೆಸಲು ಮತ್ತೊಂದು ತಿಂಗಳು ಬೇಕಾಗಲಿದೆ ಎಂದು ಚುನಾವಣಾ ಆಯೋಗ ಅಂದಾಜಿಸಿದೆ.

Related Articles

Back to top button
error: Content is protected !!