ಕುಂದಾಪುರ:ಅಲ್ವಾಡಿಯಲ್ಲಿ ಪಕ್ಕದ ಮನೆಯ ಬಾವಿಯಲ್ಲಿ ಪತಿಯ ಶವ ಪತ್ತೆ, ಅನುಮಾನಾಸ್ಪದ ಸಾವು, ಪತ್ನಿಯಿಂದ ದೂರು
Views: 18
ಕನ್ನಡ ಕರಾವಳಿ ಸುದ್ದಿ: ಪತಿ ಸುದರ್ಶನ ಪೂಜಾರಿ (34) ಅವರ ಸಾವಿನ ಬಗ್ಗೆ ಅನುಮಾನ ಇದೆ ಎಂದು ಪತ್ನಿ ಅಲ್ವಾಡಿ ಗ್ರಾಮದ ಹೊಟೇರ್‌ಮಕ್ಕಿ ಸಂಗೀತಾ ಅವರು ಶಂಕರನಾರಾಯಣ ಪೊಲೀಸರಿಗೆ ದೂರು ನೀಡಿದ್ದಾರೆ.
ಸಂಗೀತಾ ಅವರ ಮದುವೆಯು ಸುದರ್ಶನ ಪೂಜಾರಿ ಅವರೊಂದಿಗೆ ಸುಮಾರು 12 ವರ್ಷಗಳ ಹಿಂದೆ ಜೊತೆ ಮದುವೆಯಾಗಿದ್ದು, ಇಬ್ಬರಿಗೂ ಮನಸ್ತಾಪ ಉಂಟಾಗಿ ಬೇರೆ ಬೇರೆಯಾಗಿದ್ದು, ನಂತರ ಕಳೆದ ಒಂದು ವರ್ಷದ ಹಿಂದಿನಿಂದ ಇಬ್ಬರು ಚೆನ್ನಾಗಿದ್ದು ಪೋನ್ ಮುಖಾಂತರ ಮಾತಾನಾಡುತ್ತಿದ್ದರು, ನ. 3ರಂದು ಗೆಳೆಯನ ಬೈಕ್ ಹಾಳಾಗಿದೆ ಎಂದು ದೂರವಾಣಿ ಮೂಲಕ ಹೇಳಿ ಹೋದವರು ಮನೆಗೆ ಬಾರದೆ ನಾಪತ್ತೆಯಾಗಿದ್ದರು.
ನ. 4ರಂದು ಸ್ಥಳಿಯರು ಸೇರಿ ಹುಡುಕಾಡುತ್ತಿರುವಾಗ ಫಿರ್ಯಾದಿದಾರರ ಪಕ್ಕದ ಮನೆಯ ಸುರೇಶ್ ಪೂಜಾರಿ ಯವರಿಗೆ ಸೇರಿದ ಬಾವಿಯ ಪಕ್ಕದಲ್ಲಿ ಚಪ್ಪಲಿ ಕಂಡುಬಂದಿದ್ದು ಬಾವಿಯಲ್ಲಿ ನೋಡಿದಾಗ ಫಿರ್ಯಾದಿದಾರರ ಗಂಡ ಸುದರ್ಶನ ಪುಜಾರಿ ರವರ ಮೃತ ದೇಹ ಕಂಡುಬಂದಿರುತ್ತದೆ.ತನ್ನ ಪತಿಯ ಸಾವಿನ ಬಗ್ಗೆ ಅನುಮಾನ ಇದೆ ಎಂದು ಪತ್ನಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.






