ಇತರೆ

ಕುಂದಾಪುರ: ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕನ ಮೇಲೆ ಹಲ್ಲೆ! 

Views: 74

ಕನ್ನಡ ಕರಾವಳಿ ಸುದ್ದಿ: ಭಟ್ಕಳದಿಂದ ಕುಂದಾಪುರ ತೆರಳುವ ಕೆ.ಎಸ್.ಆ‌ರ್.ಟಿ.ಸಿ ಬಸ್ಸಿನಲ್ಲಿ ನಿಗದಿತ ಸ್ಥಳಕ್ಕೆ ಟಿಕೇಟ್ ಪಡೆದು ಮಧ್ಯದಲ್ಲೇ ಇಳಿಯುವ ವಿಚಾರಕ್ಕೆ ಪ್ರಯಾಣಿಕರು ಹಾಗೂ ಬಸ್ ನಿರ್ವಾಹಕನ ನಡುವೆ ವಾದ ವಿವಾದ ನಡೆದು, ಬಸ್‌ ಸಿಬ್ಬಂದಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು -ಪ್ರತಿದೂರು ದಾಖಲಾಗಿದೆ.

ಭಟ್ಕಳದಿಂದ ಕುಂದಾಪುರಕ್ಕೆ ತೆರಳುತ್ತಿದ್ದ ಬಸ್ಸಿಗೆ ಶಿರೂರು ನಿಲ್ದಾಣದಲ್ಲಿ ಇಬ್ಬರು ಮಹಿಳೆಯರು ಹತ್ತಿ ಶಕ್ತಿ ಯೋಜನೆಯಲ್ಲಿ ಟಿಕೇಟನ್ನು ಕುಂದಾಪುರಕ್ಕೆ ಪಡೆದಿರುತ್ತಾರೆ. ನಂತರ ಅದೇ ಮಹಿಳೆಯರು ಉಪ್ಪುಂದದ ನಿಲ್ದಾಣದಲ್ಲಿ ಇಳಿಯುವ ಸಲುವಾಗಿ ಬಸ್ ನಿಲ್ಲಿಸಲು ಹೇಳಿದ್ದಾರೆ. ಆಗ ನಿರ್ವಾಹಕ ಮಂಜುನಾಥ ಅವರು ಬಸ್ ನಿಲ್ಲಿಸಿ ಇಳಿಯವ ಅವಕಾಶ ನೀಡಿರಲಿಲ್ಲ. ಬಳಿಕ ಮಹಿಳೆಯರು ಕುಂದಾಪುರದಲ್ಲಿ ಬಸ್ ನಿಂದ ಇಳಿದಿದ್ದರು. ಸಂಸ್ಥೆಯ ನಿಯಮದಂತೆ ಶಕ್ತಿ ಯೋಜನೆಯಲ್ಲಿ ಟಿಕೇಟನ್ನು ಪಡೆದಿದ್ದರೇ, ಎಲ್ಲಿಗೆ ಟಿಕೇಟ್ ಮಾಡಿದ್ದಾರೋ ಅಲ್ಲೇ ಇಳಿಯಬೇಕು. ಮದ್ಯದಲ್ಲಿ ಇಳಿಯಬಾರದು ಹಾಗಾಗಿ ನಿರ್ವಾಹಕ ಮಹಿಳೆಯರಿಗೆ ಇಳಿಯಲು ಅವಕಾಶ ನೀಡಿರಲಿಲ್ಲ.

ನಂತರ ಹೊಸ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸಿದ್ದಾಗ ಅದೇ ಮಹಿಳೆಯರ ಸಂಬಂಧಿಕರಾದ ಫೈಸಲ್ ಮಹಮ್ಮದ್ ಹಾಗೂ ಆಸಿಫ್ ಎಂಬುವವರು ನಿರ್ವಾಹಕ ಮಂಜುನಾಥನ ಯೂನಿಪಾರ್ಮ್ ಶರ್ಟ ಕಾಲ‌ರ್ ಹಿಡಿದು ಉಪ್ಪುಂದದಲ್ಲಿ ನಮ್ಮ ಮನೆಯವರಿಗೆ ಏಕೆ ಬಸ್ಸನ್ನು ನಿಲ್ಲಸಲಿಲ್ಲ ಎಂದು ಅವಾಚ್ಯವಾಗಿ ಬೈದು ಅವರಿಗೆ ಕೈಯಿಂದ ಹೊಡೆದಿದ್ದಾರೆ. ಆಗಾ ಇದನ್ನು ತಪ್ಪಿಸಲು ಹೋದ ಬಸ್ ಚಾಲಕ ಲಕ್ಷ್ಮಣ ನಾಯ್ಕ ಎಂಬುವವರಿಗೆ ಹೊಡೆಯಲು ಬಂದಿದ್ದಾರೆ. ಆಗ ಚಾಲಕ ಮೊಬೈಲ್ ನಿಂದ ಪೋಟೋ ತೆಗೆಯಲು ಹೋದಾಗ ಆಪಾದಿತರು ಮೊಬೈಲ್ ಅನ್ನು ಬಿಸಾಡಿ ಅಲ್ಲಿಂದ ಹೋಗಿರುತ್ತಾರೆ ಎಂದು ದೂರು ದಾಖಲಿಸಲಾಗಿದೆ. ಸರ್ಕಾರಿ ಕರ್ತವ್ಯದಲ್ಲಿದ್ದ ಮಂಜುನಾಥನಿಗೆ ಕರ್ತವ್ಯಕ್ಕೆ ಅಡ್ಡಿ ಮಾಡಿ ಹಲ್ಲೆ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿದೆ.

ಶಿರೂರು ಬುಕಾರಿ ಕಾಲೋನಿಯ ಸನಾ ಎಂಬುವವರು ತಾಯಿ ಶಾಹಿನಾ ರವರೊಂದಿಗೆ ಕುಂದಾಪುರ ಆಸ್ಪತ್ರೆಗೆ ಹೋಗಲು ಶಿರೂರನಿಂದ ಕೆ.ಎಸ್.ಆರ್.ಟಿ.ಸಿ ಬಸ್ ಹತ್ತಿ ಎರಡು ಬಸ್ ಟಿಕೇಟ್ ಮಾಡಿದ್ದು, ನಂತರ ಉಪ್ಪುಂದ ಬಳಿ ಬರುವಾಗ ಆಸ್ಪತ್ರೆಯ ದಾಖಲೆ ಬಿಟ್ಟು ಬಂದಿರುವುದನ್ನು ಗಮನಿಸಿ ಬಸ್ ನಿರ್ವಾಹಕನಾದ ಮಂಜುನಾಥ ಅವರಲ್ಲಿ ಬಸ್ ಅನ್ನು ನಿಲ್ಲಿಸಲು ಹೇಳಿದ್ದು ಆಗ ಬಸ್ ನಿಲ್ಲಿಸಲು ಆಗುವುದಿಲ್ಲ ಎಂದು ಹೇಳಿದ್ದಾರೆ. ನಂತರ ತ್ರಾಸಿಯಲ್ಲೂ ಬಸ್ ನಿಂತಾಗ ಇಲ್ಲಿಯು ಇಳಿಯುವಂತಿಲ್ಲ ಎಂದು ಹೇಳಿ ಕುಂದಾಪುರ ಎಸ್.ಆರ್.ಟಿ.ಸಿ ನಿಲ್ದಾಣದಲ್ಲಿ ಇಳಿಯಲು ಹೇಳಿದ್ದಾರೆ. ಈ ವೇಳೆ ಶಾಹಿನಾ ಅವರನ್ನು ತಡೆದ ಉಡಾಫೆಯಾಗಿ ಮಾತನಾಡಿದ್ದಾರೆ ಎಂದು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರತಿದೂರು ದಾಖಲಿಸಲಾಗಿದೆ.

Related Articles

Back to top button
error: Content is protected !!