ಇತರೆ

ಎಂಗೇಜ್‌ಮೆಂಟ್ ಮಾಡಿಕೊಂಡಿದ್ದ ಜೋಡಿ! ಶೀಘ್ರದಲ್ಲೇ ಮದುವೆ ಆಗಲಿದ್ದಾರೆ..ವೈರಲ್ ಸುದ್ದಿಗೆ ರೋಚಕ ತಿರುವು!!

Views: 58

ಕನ್ನಡ ಕರಾವಳಿ ಸುದ್ದಿ: ಇತ್ತೀಚೆಗೆ 75ರ ವೃದ್ಧ 30ರ ಹರೆಯದ ಯುವತಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದ ಸುದ್ದಿ ಭಾರೀ ವೈರಲ್ ಆಗಿತ್ತು. ಇಬ್ಬರು ಶೀಘ್ರದಲ್ಲೇ ಮದುವೆ ಆಗಲಿದ್ದಾರೆ ಎನ್ನಲಾಗಿತ್ತು.

ಪ್ರೀತಿಗೆ ವಯಸ್ಸಿನ ಮಿತಿಯಿಲ್ಲವೆಂದು ಎಲ್ಲೆಡೆ ಈ ಸುದ್ದಿ ಭಾರೀ ವೈರಲ್ ಆಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಾಗೂ ಕಂಟೆಂಟ್ ಕ್ರಿಯೇಟರ್ ಆಗಿ ಗುರುತಿಸಿಕೊಂಡಿರುವ 30 ವರ್ಷದ ರೀನಾ, ತಮಗಿಂತ 45 ವರ್ಷ ಹಿರಿಯರಾದ 75 ವರ್ಷದ ರಾಮ್ ಸಾಗರ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಎನ್ನಲಾಗಿತ್ತು.

ಸುಮಾರು 1 ವರ್ಷದ ಹಿಂದೆ ಭೇಟಿಯಾದ ಇವರ ನಡುವೆ ಸ್ನೇಹ ಬೆಳೆದು, ನಂತರ ಅದು ಪ್ರೀತಿಯಾಗಿ ಬದಲಾಗಿದೆ. ಇತ್ತೀಚೆಗೆ ಕುಟುಂಬಸ್ಥರ ಸಮ್ಮುಖದಲ್ಲಿ ಇಬ್ಬರ ನಿಶ್ಚಿತಾರ್ಥ ಕಾರ್ಯಕ್ರಮ ನೆರವೇರಿತ್ತು ಎಂದು ವರದಿಯಾಗಿತ್ತು.

ನವರಾತ್ರಿ ಹಬ್ಬದ ಬಳಿಕ ವಿವಾಹವಾಗುವುದಾಗಿ ಜೋಡಿ ಹೇಳಿತ್ತು. ಆದರೆ ಇದೀಗ ಈ ಸುದ್ದಿಗೆ ರೋಚಕ ತಿರುವು ಸಿಕ್ಕಿದೆ.

ಯುವತಿ ಈಗ ಮದುವೆ ಕ್ಯಾನ್ಸಲ್ ಮಾಡಿದ್ದು, ತನ್ನ ಮೊದಲ ಗಂಡನ ಜತೆಯೇ ಇರುವುದಾಗಿ ಹೇಳಿಕೊಂಡಿದ್ದಾಳೆ. ಇದಲ್ಲದೆ ಎಂಗೇಜ್‌ಮೆಂಟ್ ಹಿಂದಿನ ಸತ್ಯಾಂಶವನ್ನು ಹೇಳಿದ್ದಾಳೆ.

ಈ ಎಲ್ಲಾ ವಿಡಿಯೋಗಳನ್ನು ಕೇವಲ ‘ಸೋಷಿಯಲ್‌ ಮೀಡಿಯಾ ಕಂಟೆಂಟ್‌’ಗಾಗಿ ಮಾತ್ರ ಮಾಡಲಾಗಿತ್ತು, ವಾಸ್ತವದಲ್ಲಿ ತಾವು ರಾಮ್‌ಸಾಗ‌ರ್ ಅವರನ್ನು ಮದುವೆಯಾಗಿಲ್ಲ ಎಂದು ಆಕೆ ಹೇಳಿದ್ದಾಳೆ. ಅಷ್ಟೇ ಅಲ್ಲದೆ, ತನ್ನ ಪತಿ ಮತ್ತೆ ಮನೆಗೆ ಮರಳಿದ್ದಾನೆ ಎಂದೂ ಆಕೆ ತಿಳಿಸಿದ್ದಾಳೆ.

ಇದರ ಬೆನ್ನಲ್ಲೇ ರೀನಾ ತನ್ನ ಪತಿಯೊಂದಿಗಿನ ಕೆಲವು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾಳೆ. ಒಂದು ವಿಡಿಯೋದಲ್ಲಿ ಇಬ್ಬರೂ ಪರಸ್ಪರ ಹೂವಿನ ಹಾರ ಹಾಕಿಕೊಳ್ಳುತ್ತಿರುವುದು ಕಂಡುಬಂದಿದ್ದರೆ, ಮತ್ತೊಂದು ವಿಡಿಯೋದಲ್ಲಿ ಯುವಕನೊಬ್ಬ ರೀನಾಳ ಹಣೆಗೆ ಸಿಂಧೂರ ಇಡುತ್ತಿರುವುದು ಕಂಡುಬಂದಿದೆ. ಈ ಪೋಸ್ಟ್‌ಗಳ ಮೂಲಕ ರೀನಾ ತನ್ನ ವೈವಾಹಿಕ ಜೀವನದ ಬಗ್ಗೆ ಸ್ಪಷ್ಟನೆ ನೀಡಿದ್ದಾಳೆ.

ಸ್ಪಷ್ಟನೆ ನೀಡಿದ ಯುವತಿ…

ರಾಮ್‌ಸಾಗ‌ರ್ ಅವರೊಂದಿಗಿನ ಮದುವೆಯ ವಿಡಿಯೋಗಳ ಕುರಿತು ಮಾತನಾಡಿದ ರೀನಾ, ವಿಡಿಯೋಗಳನ್ನು ಮಾಡಲು ತನಗೆ ಸೂಚಿಸಲಾಗಿತ್ತು ಎಂದು ಪ್ರತಿಪಾದಿಸಿದ್ದಾಳೆ. “ನನಗೆ ಏನು ಮಾಡಲು ಹೇಳಲಾಗುತ್ತಿತ್ತೋ, ಅದನ್ನಷ್ಟೇ ನಾನು ಮಾಡಿದೆ. ನನಗೆ ಸಣ್ಣ ಮಕ್ಕಳಿದ್ದಾರೆ ಮತ್ತು ಪತಿಯೂ ಇದ್ದಾನೆ. ಹಾಗಿರುವಾಗ ನಾನು ಈ ವಯಸ್ಸಾದ ವ್ಯಕ್ತಿಯನ್ನು ಹೇಗೆ ಮದುವೆಯಾಗಲಿ?” ಎಂದು ಆಕೆ ಪ್ರಶ್ನಿಸಿದ್ದಾಳೆ.

ರಾಮ್‌ಸಾಗ‌ರ್ ಅವರ ಮಗಳು ರಾಧಾ ಈ ವಿಷಯದಲ್ಲಿ ಸುಳ್ಳು ಹೇಳುತ್ತಿದ್ದಾಳೆ ಎಂದು ರೀನಾ ಆರೋಪಿಸಿದ್ದಾಳೆ. ವಿಡಿಯೋದಲ್ಲಿ ತೋರಿಸಲಾದ ನಿಶ್ಚಿತಾರ್ಥದ ಘಟನೆ ನಿಜವಾಗಿದ್ದರೆ, ಅದಕ್ಕೆ ಬೇರೆಯದೇ ಆದ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿತ್ತು ಎಂದು ಹೇಳುವ ಮೂಲಕ ಆಕೆ ಆ ಆರೋಪಗಳನ್ನು ಅಲ್ಲಗೆಳೆದಿದ್ದಾಳೆ.

ಇದಲ್ಲದೆ ನಿಶ್ಚಿತಾರ್ಥದ ವಿಡಿಯೋವನ್ನು ಕೇವಲ ವೀವ್‌ಗೋಸ್ಕರ ಮಾಡಲಾಗಿತ್ತು ಎಂದು ರೀನಾ ಹೇಳಿದ್ದಾರೆ.

Related Articles

Back to top button
error: Content is protected !!