ಯುವಜನ

ನದಿಗೆ ಹಾರಿ ಶಿಕ್ಷಕಿ ಸಾವು: ಪ್ರಿಯತಮ ಸೇರಿ ಮೂವರಿಗೆ ಗಲ್ಲು ಶಿಕ್ಷೆ ನೀಡಿ ಡೆತ್‌ನೋಟ್‌ನಲ್ಲಿ ಉಲ್ಲೇಖ!

Views: 53

ಕನ್ನಡ ಕರಾವಳಿ ಸುದ್ದಿ: ದಸರಾ ಹಬ್ಬದ ದಿನವೇ ಶಾಲಾ ಶಿಕ್ಷಕಿಯೊಬ್ಬರು ತುಂಗಭದ್ರಾ ಜಲಾಶಯದ ಹಿನ್ನೀರಿಗೆ ಜಿಗಿದು ಮಾಡಿಕೊಂಡ ಘಟನೆ ಕೊಪ್ಪಳದಲ್ಲಿ ನಡೆದಿದೆ.

ಕೊಪ್ಪಳ ತಾಲೂಕಿನ ಕಾತರಕಿ ಗ್ರಾಮದ ಖಾಸಗಿ ಶಾಲಾ ಶಿಕ್ಷಕಿ ಸಂಗೀತ ಮೇಟಿ ಆತ್ಮಹತ್ಯೆಗೆ ಶರಣಾದ ದುರ್ದೈವಿ. ಅ.19 ರಂದು ಕೊಪ್ಪಳಕ್ಕೆ ಹೋಗಿಬರುವುದಾಗಿ ಹೇಳಿ ಸಂಗೀತ ಹೋಗಿದ್ದರು. ಇಂದು ಬೆಳಗ್ಗೆ ವಿಜಯನಗರ ಜಿಲ್ಲೆಯ ಗಡಿ ಭಾಗದಲ್ಲಿ ಅವರ ಮೃತದೇಹ ಪತ್ತೆಯಾಗಿದೆ.

ಆತ್ಮಹತ್ಯೆಗೂ ಮುನ್ನ ಡೆತ್‌ ನೋಟ್ ಬರೆದಿಟ್ಟಿರುವ ಸಂಗೀತ, ಸುಮಾರು 14 ವರ್ಷಗಳಿಂದ ತನ್ನ ಸಂಬಂಧಿ ವಿಕಾಸ್‌ನನ್ನು ಪ್ರೀತಿ ಮಾಡುತ್ತಿರುವುದಾಗಿ ಉಲ್ಲೇಖಿಸಿದ್ದಾಳೆ. ಪ್ರೀತಿ ವಿಚಾರ ಇಬ್ಬರ ಮನೆಯವರಿಗೂ ಗೊತ್ತಿತ್ತು. ಆದರೆ ಮದುವೆ ವಿಚಾರಕ್ಕೆ ವಿಕಾಸ್ ಮನೆಯಲ್ಲಿ ಗೊಂದಲವಿತ್ತು. ವಿಕಾಸ್ ಸಹೋದರ ವಸಂತ್ ಹಾಗೂ ಆತನ ಪತ್ನಿ ರೇಣುಕಾ ಮದುವೆಗೆ ಅಡ್ಡಿ ಮಾಡುತ್ತಿದ್ದಾರೆ. ಈ ಮೂವರಿಗೂ ಗಲ್ಲು ಶಿಕ್ಷೆ ಆಗಬೇಕು ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ.

Related Articles

Back to top button
error: Content is protected !!