ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರದ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ
Views: 23
ಕನ್ನಡ ಕರಾವಳಿ ಸುದ್ದಿ: ಶ್ರೀ ಮೂಕಾಂಬಿಕಾ ದೇವಳದ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರದ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಅಶೋಕ್ ಶೆಟ್ಟಿ,ಉದ್ಯಮಿಗಳು ಬಿದ್ಕಲ್ ಕಟ್ಟೆ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಅವರು ತಮ್ಮ ಉದ್ಘಾಟನಾ ಅನಿಸಿಕೆಯಲ್ಲಿ ಶಿಬಿರಾರ್ಥಿಗಳು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಇದರಿಂದ ಅವರ ಮಾನಸಿಕ ಸ್ಥಿತಿ ಉತ್ತಮವಾಗಿರುತ್ತದೆ. ಎಲ್ಲಾ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಲು ಸಹಾಯವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ದಿನಪಾಲ ಶೆಟ್ಟಿ,ಮಾಜಿ ಅಧ್ಯಕ್ಷರು,ಗ್ರಾಮ ಪಂಚಾಯತ್ ಮೊಳಹಳ್ಳಿ,ಇವರು ವಹಿಸಿದ್ದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಶಾಂತಾರಾಮ್ ಶೆಟ್ಟಿ ಉಪನ್ಯಾಸಕರು ಡಾ. ಎನ್. ಎಸ್. ಎ .ಎಂ.ಪದವಿ ಪೂರ್ವ ಕಾಲೇಜು ನಿಟ್ಟೆ, ಇವರು ಯುವ ಮನಸ್ಸುಗಳು ಹೇಗಿರಬೇಕು ಎಂಬುದನ್ನು ಸೋದಾ ಹರಣವಾಗಿ ಹೃದಯಸ್ಪರ್ಶಿಯಾಗಿ ವಿವರಿಸಿದರು.
ವೇದಿಕೆಯಲ್ಲಿ ಶ್ರೀ ಜಯಪ್ರಕಾಶ್ ಶೆಟ್ಟಿ ಉದ್ಯಮಿಗಳು ಚಿಟ್ಟಿಬೈಲು, ಶ್ರೀಮತಿ ಸುಮನ ಮಾಜಿ ಸದಸ್ಯರು, ಜಿಲ್ಲಾ ಪಂಚಾಯತ್ ಹಾಲಾಡಿ, ಶ್ರೀಮೋಹನದಾಸ್ ಶೆಟ್ಟಿ ಅಧ್ಯಕ್ಷರು ಹಾಲು ಉತ್ಪಾದಕರ ಸಂಘ ಬಿದ್ಕಲ್ ಕಟ್ಟೆ ಇವರುಗಳು ಉಪಸ್ಥಿತರಿದ್ದು ಶಿಬಿರದ ಯಶಸ್ಸಿಗೆ ಶುಭ ಕೋರಿದರು.
ಎನ್ ಎಸ್ ಎಸ್ ಯೋಜನಾಧಿಕಾರಿ ಶ್ರೀಮತಿ ಜ್ಯೋತಿ ಎ ಶೆಟ್ಟಿ ಪ್ರಸ್ತಾವಿಕ ಮಾತುಗಳೊಂದಿಗೆ ಅತಿಥಿ ಗಣ್ಯರನ್ನು ಸ್ವಾಗತಿಸಿದರು.
ಕನ್ನಡ ಉಪನ್ಯಾಸಕ ಎಂ ವಾಸುದೇವ ಉಡುಪ ಕಾರ್ಯಕ್ರಮ ನಿರೂಪಿಸಿದರು. ಹಾಗೂ ದೈಹಿಕ ಶಿಕ್ಷಣ ಉಪನ್ಯಾಸಕ ಹೆಚ್ ಸುಕೇಶ್ ಶೆಟ್ಟಿ ವಂದನಾರ್ಪಣೆಗೈದರು.








