ಇತರೆ

ಕುಂದಾಪುರ: ಸಮಾಜ ಸೇವಕಿ, ಉಪನ್ಯಾಸಕಿ ಡಾ.ಪ್ರಮೀಳಾ ವಾಜ್ ನಿಧನ

Views: 499

ಕನ್ನಡ ಕರಾವಳಿ ಸುದ್ದಿ: ಸಮಾಜ ಸೇವಕಿ, ಉಪನ್ಯಾಸಕಿ, ತೆಕ್ಕಟ್ಟೆ ನಿವಾಸಿ ಡಾ. ಪ್ರಮೀಳಾ ವಾಜ್ (60) ಅ.2ರಂದು ನಿಧನರಾದರು.

ಮೃತರು ಪತಿ ಬೇಳೂರು ಸ್ಪೂರ್ತಿಧಾಮದ ಕಾರ್ಯನಿರ್ವಾಹಕ ಕೇಶವ ಕೋಟೇಶ್ವರ, ಕುಂದಾಪುರದ ಖ್ಯಾತ ಕ್ರಿಕೆಟಿಗ ಪ್ರದೀಪ್ ವಾಜ್ ಅವರ ಹಿರಿಯ ಸಹೋದರಿಯಾಗಿರುತ್ತಾರೆ. ಮತ್ತು ಪುತ್ರಿಯನ್ನು ಅಗಲಿದ್ದಾರೆ.

ತೆಂಕನಿಡಿಯೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಮಾಜ ಕಾರ್ಯ ಸ್ನಾತಕೋತ್ತರ ವಿಭಾಗದಲ್ಲಿ ಉಪನ್ಯಾಸಕಿಯಾಗಿರುವ ಪ್ರಮೀಳಾ ವಾಜ್ ಅವರು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಅಭಿವೃದ್ಧಿ ಅಧ್ಯಯನ ವಿಭಾಗಕ್ಕೆ ಸಲ್ಲಿಸಿದ ‘ಮಕ್ಕಳ ರಕ್ಷಣಾ ವ್ಯವಸ್ಥೆ ಮತ್ತು ಮಕ್ಕಳ ಅಭಿವೃದ್ಧಿ’ ಎಂಬ ಮಹಾಪ್ರಬಂಧಕ್ಕೆ ಪಿಹೆಚ್‌ಡಿ ಪದವಿ ಪಡೆದಿದ್ದಾರೆ.

ಪ್ರಮೀಳಾ ವಾಜ್, ಸರಕಾರಿ ಪ್ರಥಮ ದರ್ಜೆ ಕಾಲೇಜು ಬಾರಕೂರು ಹಾಗೂ ಕೋಟ ಪಡುಕೆರೆಯಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರಿಗೆ ಕರಾವಳಿಯ ವಿವಿಧ ಎನ್‌ಜಿಒಗಳಲ್ಲಿ ಸೇವೆ ಸಲ್ಲಿಸಿದ ಅಪಾರ ಅನುಭವವಿದೆ.

Related Articles

Back to top button
error: Content is protected !!