ವಿವೇಕ ವಿದ್ಯಾಸಂಸ್ಥೆ: ಹಿಂದಿನ ವಿದ್ಯಾರ್ಥಿಸಂಘ ಮಹಾಸಭೆ – ಅಭಿನಂದನೆ – ಸನ್ಮಾನ
Views: 45
ಕನ್ನಡ ಕರಾವಳಿ ಸುದ್ದಿ: ವಿವೇಕ ಹಿಂದಿನ ವಿದ್ಯಾರ್ಥಿ ಸಂಘದ ಮಹಾಸಭೆಯು ಸೆ.20 ರಂದು ರಮಾನಂದ ಭಟ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಶೈಲಜಾ ಉರಾಳರ ಪ್ರಾರ್ಥನೆಯೊಂದಿಗೆ ಆರಂಭವಾದ ಸಭೆಯಲ್ಲಿ ರಮಾನಂದ ಭಟ್ ಪ್ರಾಸ್ತಾವಿಕ ನುಡಿಗಳೊಂದಿಗೆ, ಅಂದು ವಿವೇಕ ವಿದ್ಯಾಸಂಸ್ಥೆಯ ಹಿಂದಿನ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು ಇಂದು ಆಡಳಿತ ಮಂಡಳಿಯ ಅಧ್ಯಕ್ಷರಾಗಿರುವ ಭಾಸ್ಕರ ಹಂದೆಯವರನ್ನು ಅಭಿನಂದಿಸುವ ಅವಕಾಶಕ್ಕಾಗಿ ಸಂತಸ ವ್ಯಕ್ತಪಡಿಸಿ, ಸಂಘಟನೆಯ ಬಲವನ್ನು ಹೆಚ್ಚಿಸಿ ಮಾತೃಸಂಸ್ಥೆಯ ಸೇವೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.
ಈ ಸಭೆಯಲ್ಲಿ ಭಾಸ್ಕರ ಹಂದೆಯವರನ್ನು ಗೌರವಿಸಲಾಯಿತು. ಸಾಲಿಗ್ರಾಮದ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯ ತಾರಾನಾಥ ಹೊಳ್ಳ ಅಭಿನಂದನೆಯ ನುಡಿಗಳನ್ನಾಡಿದರು.
ತನಗೆ ನೀಡಿದ ಗೌರವಕ್ಕೆ ಕೃತಜ್ಞತೆ ಸಲ್ಲಿಸಿದ ಭಾಸ್ಕರ ಹಂದೆಯವರು ಅಮೃತ ಮಹೋತ್ಸವದ ಸಂದರ್ಭದಲ್ಲಿ ಹಿಂದಿನ ವಿದ್ಯಾರ್ಥಿಗಳು ಮತ್ತು ಸಂಘ ನೀಡಿದ ನೆರವು ಸಂಸ್ಥೆಯ ಬಲವನ್ನು ಹೆಚ್ಚಿಸಿದೆಯೆಂದು ತಿಳಿಸಿ, ಮುಂದಿನ ದಿನಗಳಲ್ಲಿಯೂ ಇದು ಮುಂದುವರಿಯಲಿದೆ ಎಂಬ ಆಶಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ವೆಂಕಟೇಶ ಉಡುಪ ಹಾಗೂ ಕಚೇರಿ ಸಹಾಯಕ ವಿಶ್ವನಾಥ ಹೇರ್ಳೇಯವರನ್ನು ಸನ್ಮಾನಿಸಲಾಯಿತು.ಸಂಘದ ಗೌರವಾಧ್ಯಕ್ಷರಾದ ಪ್ರಾಂಶುಪಾಲ ಜಗದೀಶ ನಾವಡರು ನಿವೃತ್ತರ ಸೇವೆಯನ್ನು ಸ್ಮರಿಸಿದರು. ವೆಂಕಟೇಶ ಉಡುಪರು ತನ್ನ ಅಧಿಕಾರಾವಧಿಯಲ್ಲಿ ಹಿಂದಿನ ವಿದ್ಯಾರ್ಥಿ ಸಂಘ ನೀಡಿದ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.
ವಿವೇಕ ವಿದ್ಯಾಸಂಸ್ಥೆಗಳಲ್ಲಿ ಅಧ್ಯಯನ ಮಾಡಿ ಎಸ್.ಎಸ್. ಎಲ್. ಸಿ ಪರೀಕ್ಷೆಯಲ್ಲಿ ಸಾಧನೆ ತೋರಿದ ಹಾಗೂ ಇಲ್ಲಿಯೇ ಪದವಿಪೂರ್ವ ಶಿಕ್ಷಣ ಪಡೆಯುತ್ತಿರುವ ಹಾಗೂ ಪಿ.ಯು.ಸಿ.ಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಲಾಯಿತು. ರೇವತಿಯವರು ಪುರಸ್ಕೃತರನ್ನು ಪರಿಚಯಿಸಿದರು.ಕಾರ್ಯದರ್ಶಿ ಸುಧಾಕರ ಮಂಡಿಸಿದ ವರದಿಯನ್ನು, ಕೋಶಾಧಿಕಾರಿ ಪಂಜು ಪೂಜಾರಿ ಮಂಡಿಸಿದ ಪರಿಶೋಧಿತ ಲೆಕ್ಕ ಪತ್ರವನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.
ಗೌರವ ಉಪಾಧ್ಯಕ್ಷರಾದ ಪ್ರೇಮಾನಂದ, ರತಿ ಬಾಯಿ ಹಾಗೂ ಪ್ರೀತಿರೇಖಾ ಉಪಸ್ಥಿತರಿದ್ದರು.
ಶಶಿಧರ ಮಯ್ಯ ನಿರೂಪಿಸಿದ ಕಾರ್ಯಕ್ರಮದ ಕೊನೆಯಲ್ಲಿ ಜೊತೆ ಕಾರ್ಯದರ್ಶಿ ಚಂದ್ರಶೇಖರ ಮೆಂಡನ್ ಧನ್ಯವಾದ ಸಮರ್ಪಿಸಿದರು.
ಮಹಾಸಭೆಯ ನಂತರ ನಡೆದ ನೂತನ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಅಧ್ಯಕ್ಷರಾಗಿ ರಮಾನಂದ ಭಟ್ ಪುನರಾಯ್ಕೆಗೊಂಡರು.
ಉಪಾಧ್ಯಕ್ಷರಾಗಿ ಶಶಿಧರ ಮಯ್ಯ ಹಾಗೂ ಡಾ.ಜಗದೀಶ ಹೊಳ್ಳ ,ಕಾರ್ಯದರ್ಶಿಯಾಗಿ ಸುಧಾಕರ್ ಪಿ.ಜೊತೆ ಕಾರ್ಯದರ್ಶಿಗಳಾಗಿ ರೊ.ಚಂದ್ರಶೇಖರ ಮೆಂಡನ್, ಮತ್ತು ಜಿ.ಸಂಜೀವ, ಕೋಶಾಧಿಕಾರಿಯಾಗಿ ಪಂಜು ಪೂಜಾರಿ ಆಯ್ಕೆಯಾದರು. ಸ್ವಾಗತಿಸಿದ ರಮಾನಂದ ಭಟ್ಟರು ತನ್ನನ್ನು ಆಯ್ಕೆ ಮಾಡಿದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. ಜಿ. ಸಂಜೀವ ಧನ್ಯವಾದ ಸಮರ್ಪಿಸಿದರು.






