ಶಿಕ್ಷಣ
ಶಾಲೆಯಲ್ಲಿ ಭೀಕರ ದುರಂತ; ಮೆಟ್ಟಿಲಿಂದ ಆಕಸ್ಮಿಕವಾಗಿ ಬಿದ್ದು 4ನೇ ತರಗತಿ ವಿದ್ಯಾರ್ಥಿನಿ ದುರ್ಮರಣ
Views: 70
ಕನ್ನಡ ಕರಾವಳಿ ಸುದ್ದಿ: ಖಾಸಗಿ ಶಾಲೆಯ ಮೆಟ್ಟಿಲಿನಿಂದ ಆಕಸ್ಮಿಕವಾಗಿ ಬಿದ್ದು, ಒಂಬತ್ತು ವರ್ಷದ 4ನೇ ತರಗತಿ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ. ತೆಲಂಗಾಣ ದ ರಂಗಾರೆಡ್ಡಿ ಜಿಲ್ಲೆಯ ಶಾದ್‌ನಗರ ಪಟ್ಟಣದ ಶಾಲೆಯೊಂದರಲ್ಲಿ ಈ ಶಾಕಿಂಗ್ ಘಟನೆ ನಡೆದಿದೆ. ಶಾದ್ ನಗರದ ಇಂಡಿಯನ್ ಪಬ್ಲಿಕ್ ಶಾಲೆಯಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ವಿದ್ಯಾರ್ಥಿನಿ ಮೆಟ್ಟಿಲು ಇಳಿಯುವಾಗ ಜಾರಿ ಬಿದ್ದು ಸಮತೋಲನ ಕಳೆದುಕೊಂಡಿದ್ದಳು ಎನ್ನಲಾಗಿದೆ..
ಮೆಟ್ಟಿಲಿನಿಂದ ಬಿದ್ದ ಪರಿಣಾಮ ಬಾಲಕಿಯ ಮುಖಕ್ಕೆ ಗಂಭೀರ ಗಾಯಗಳಾಗಿದ್ದು, ಕೂಡಲೇ ಪ್ರಜ್ಞೆ ತಪ್ಪಿದೆ. ಶಾಲಾ ಸಿಬ್ಬಂದಿ ತಕ್ಷಣವೇ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಮೃತಪಟ್ಟಿದ್ದಾಳೆ. ಮೆಟ್ಟಿಲುಗಳ ಬಳಿ ಅಳವಡಿಸಲಾದ ಸಿಸಿಟಿವಿ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದೆ. ಹೆಚ್ಚಿನ ವಿವರ ನಿರೀಕ್ಷಿಲಾಗುತ್ತಿದೆ.






