ಇತರೆ

ಬ್ರಹ್ಮಾವರ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘ: ವಾರ್ಷಿಕ ಮಹಾಸಭೆ

Views: 44

ಕನ್ನಡ ಕರಾವಳಿ ಸುದ್ದಿ: ಬ್ರಹ್ಮಾವರ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದ 2025-2026ನೇ ವಾರ್ಷಿಕ ಮಹಾಸಭೆ ಸೆಪ್ಟೆಂಬರ್ 6 ರಂದು ರವಿವಾರ ಶ್ರೀ ಸೀತಾರಾಮ ಸಂಕೀರ್ಣದ ಮಹಡಿಯಲ್ಲಿ ಸಂಘದ ಅಧ್ಯಕ್ಷ ರಾಘವ ಶೆಟ್ಟಿಗಾರ್ ಅವರ ಅಧ್ಯಕ್ಷತೆಯಲ್ಲಿ ಜರಗಿತು.

ವೇದಿಕೆಯಲ್ಲಿ ನಿರ್ದೇಶಕರಾದ ಕೃಷ್ಣ ಶೆಟ್ಟಿಗಾರ್, ಶ್ರೀನಾಥ ಶೆಟ್ಟಿಗಾರ್, ಉದಯ ಶೆಟ್ಟಿಗಾರ್, ಸುಧಾಕರ್ ಶೆಟ್ಟಿಗಾರ್, ಶ್ರೀನಿವಾಸ ಶೆಟ್ಟಿಗಾರ್, ಸುಮಿತ್ರಾ ಶೆಟ್ಟಿಗಾರ್, ಶೋಭಾ ಶೆಟ್ಟಿಗಾರ್ ಹಾಗೂ ಗೌರವ ಸಿಬ್ಬಂದಿಗಳಾದ ಸುರೇಶ ಶೆಟ್ಟಿಗಾರ್, ಶಶಿಧರ್ ಶೆಟ್ಟಿಗಾರ್ ಬಾರ್ಕೂರು ಉಪಸ್ಥಿತರಿದ್ದರು.

ಅಧ್ಯಕ್ಷ ರಾಘವ ಶೆಟ್ಟಿಗಾರ್ ಅವರು ಹಾಗೂ ನಿರ್ದೇಶಕರುಗಳು ಜೊತೆಯಾಗಿ ದೀಪ ಬೆಳಗಿಸಿದರು. ಅಧ್ಯಕ್ಷ ಶ್ರೀ ರಾಘವ ಶೆಟ್ಟಿಗಾರ್ ಮಾತನಾಡಿ 79ವರ್ಷ ಪೂರೈಸಿ 80ನೆ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಈ ಸಂದರ್ಭ ಗೌರನ್ವಿತಾ ಸದಸ್ಯರಿಗೆ ಅಭಿಮಾನದಿಂದ ಶುಭಾಶಯ ತಿಳಿಸಿದರು. ಸದಸ್ಯರ ಸಂಖ್ಯೆ ಹೆಚ್ಚು ಮಾಡುವ ಮತ್ತು ಪಾಲು ಬಂಡವಾಳ ಹೆಚ್ಚಿಸುವಲ್ಲಿ ನಿರ್ದೇಶಕರು, ಸಿಬ್ಬಂದಿಯವರು ಒಟ್ಟಾಗಿ ಶ್ರಮಿಸುವ ಎಂಬುದಾಗಿ ಕರೆಕೊಟ್ಟರು. ಹೊಸ ಖಾತೆ, ಠೇವಣಿ, ಪಿಗ್ಮಿಗಳಲ್ಲಿ ಹಣ ತೊಡಗಿಸುವರೆ ವಿನಂತಿಸಿದರು. ಸಿಬ್ಬಂದಿಯವರು ಗ್ರಾಹಕ ಬಂಧುಗಳಿಗೆ ಶೀಘ್ರ ಸ್ಪಂದಿಸಿ ಸೇವೆ ನೀಡುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶ್ಲಾಘಿಸಿದರು. ವೈಯಕ್ತಿಕ ಸಾಲ, ದ್ವಿಚಕ್ರ ವಾಹನ ಸಾಲ, ಚಿನ್ನಾಭರಣ ಅಡವಿನ ಸಾಲ ಹಾಗೂ ಕ್ಲಪ್ತ ಸಮಯದಲ್ಲಿ ಹಿಂದಿರುಗಿಸುವ ಬಗ್ಗೆ ವಿನಂತಿಸಿದರು. ನಿರಂತರ ಸಂಘದೊಂದಿಗೆ ಸಂಪರ್ಕದ ಬಗ್ಗೆ ತಿಳಿಸಿದರು. 10ಶೇ. ಡಿವಿಡೆಂಡ್ ಘೋಷಿಸಿದರು.

ವ್ಯವಸ್ಥಾಪಕ ನಿರ್ದೇಶಕಿ ಶ್ರೀಮತಿ ಶಶಿಕಲಾ ಅವರು ಮಂಡಿಸಿದ ವಾರ್ಷಿಕ ವರದಿ, ಲೆಕ್ಕಪತ್ರ, ಬಡ್ಜೆಟ್ ಗೆ ಅನುಮೋದನೆ ಪಡೆದುಕೊಳ್ಳಲಾಯಿತು.

ಉಪಾಧ್ಯಕ್ಷರಾದ ಶ್ರೀಧರ್ ಶೆಟ್ಟಿಗಾರ್ ಅವರು ಮಾತನಾಡಿ ಸಂಘದ ಶ್ರೇಯೋಭಿವೃದ್ಧಿಗಾಗಿ ಸಂಘದೊಂದಿಗೆ ನಿಕಟ ಸಂಪರ್ಕ, ಉತ್ತಮ, ಬಾಂಧವ್ಯ ಇಟ್ಟುಕೊಳ್ಳುವಂತೆ ಕೋರಿದರು.

ಹಿರಿಯ ನೇಕಾರರಾದ ಸಾಲಿಕೇರಿ ಅಂಗಡಿಮನೆ ಶೇಖರ ಶೆಟ್ಟಿಗಾರ್ ದಂಪತಿ ಹಾಗೂ ಸಾಸ್ತಾನ ಗುಂಡ್ಮಿ ವನಜ ಶೆಟ್ಟಿಗಾರ್ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಹಿರಿಯ ಸದಸ್ಯರಾದ ಪದ್ಮನಾಭ ಶೆಟ್ಟಿಗಾರ್, ಸಂಜೀವ ಶೆಟ್ಟಿಗಾರರು ಸೌಲಭ್ಯದೊರಕಿಸಿ ಕೊಡುವಲ್ಲಿ ಮುತುವರ್ಜಿ ವಹಿಸುವರೇ ತಿಳಿಸಿದರು.

ಕೃಷ್ಣಮೂರ್ತಿ ಶೆಟ್ಟಿಗಾರ್ ಪ್ರಾರ್ಥನೆಗೈದರು. ಉಪಾಧ್ಯಕ್ಷ ಶ್ರೀಧರ್ ಶೆಟ್ಟಿಗಾರ್ ಸ್ವಾಗತಿದರು ನಿರ್ದೇಶಕರಾದ ಸುಧಾಕರ್ ಶೆಟ್ಟಿಗಾರ್ ನಿರೂಪಣೆ ಹಾಗೂ ಧನ್ಯವಾದಗೈದರು.

ರಾಷ್ಟ್ರಗೀತೆಯೊಂದಿಗೆ ಸಭೆ ಮುಕ್ತಾಯವಾಯಿತು.

Related Articles

Back to top button
error: Content is protected !!