ಯುವಜನ

ಪಿಯುಸಿ ವಿದ್ಯಾರ್ಥಿನಿಯರು ಪರೀಕ್ಷಾ ಭಯದಿಂದ ನಾಪತ್ತೆಯಾಗಿ 7 ತಿಂಗಳು..ಕಳ್ಳಸಾಗಣೆ ಶಂಕೆ? 

Views: 81

ಕನ್ನಡ ಕರಾವಳಿ ಸುದ್ದಿ: ಬೆಂಗಳೂರಿನ ವಿದ್ಯಾರಣ್ಯಪುರದ ಇಬ್ಬರು ಹೆಣ್ಣು ಮಕ್ಕಳು ನಾಪತ್ತೆ ಆಗಿ 7 ತಿಂಗಳು ಕಳೆದಿದೆ. ಇಲ್ಲಿಯವರೆಗೆ ಎಲ್ಲಿದ್ದಾರೆ ಅನ್ನೋ ಸಣ್ಣ ಸುಳಿವೂ ಕೂಡ ಇಲ್ಲ. ಇಬ್ಬರೂ ಕೊನೆಯದಾಗಿ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದರೆಂಬ ಮಾಹಿತಿ ಲಭ್ಯವಾಗಿದ್ದು, ಅಲ್ಲಿಂದ ಮುಂದೆ ಏನಾದರು ಎಂಬುದು ನಿಗೂಢವಾಗಿದೆ.

ಹೈಕೋರ್ಟ್‌ನಲ್ಲಿ ಪೋಷಕರು ಹೇಬಿಯಸ್ ಕಾರ್ಪಸ್ ಅರ್ಜಿ ಕೂಡ ಹಾಕಿದ್ದಾರೆ. ಈಗ ಪೊಲೀಸರು ನಾಪತ್ತೆ ಆದ ಹೆಣ್ಣು ಮಕ್ಕಳನ್ನು ಕೋರ್ಟ್ ಎದುರು ಹಾಜರು ಮಾಡಲೇಬೇಕು. ಕನಿಷ್ಠಪಕ್ಷ ಮೃತದೇಹ ಆದರೂ ಹಾಜರು ಮಾಡಬೇಕು.

2026 ಜನವರಿ 31 ರಂದು ಕಾಣೆಯಾಗಿದ್ದ ಇಬ್ಬರು ವಿದ್ಯಾರ್ಥಿನಿಯರಾದ ತೇಜಸ್ವಿನಿ ಮತ್ತು ತನಿಷ್ಕಾಗಾಗಿ ಪೊಲೀಸರ ಹುಡುಕಾಟ ಮುಂದುವರಿದಿದೆ. ಇದೀಗ ಸಿಐಡಿ ಅಧಿಕಾರಿಗಳೂ ಹುಡುಕಾಟ ನಡೆಸಿದ್ದಾರೆ.

ಪರೀಕ್ಷಾ ಭಯದಿಂದ ತಪ್ಪಿಸಿಕೊಳ್ಳಲು ಮನೆಯಿಂದ ಹೋಗಿದ್ದಾರೆ ಅನ್ನೋ ಶಂಕೆ ವ್ಯಕ್ತವಾಗಿತ್ತು. ಮಹದೇಶ್ವರ ಬೆಟ್ಟಕ್ಕೆ ಹೋದ ಯುವತಿಯರು ಎಲ್ಲಿಗೆ ಹೋದರು..? ಏನಾದ್ರು ಅನ್ನೋದು ಯಕ್ಷ ಪ್ರಶ್ನೆ ಎದುರಾಗಿದೆ.‌

ಕರ್ನಾಟಕದಲ್ಲಿ ಹೆಣ್ಣು ಮಕ್ಕಳ ಕಳ್ಳಸಾಗಣೆ ಆಗ್ತಿದ್ಯಾ..?

ಅನ್ನೋದು ಈಗ ಅನುಮಾನ ದಟ್ಟವಾಗಿದ್ದು, 3 ತಿಂಗಳ ಬಳಿಕ ಪ್ರಕರಣ ಸಿಐಡಿಗೆ ವರ್ಗಾಯಿಸಿ ಆದೇಶ ಮಾಡಲಾಗಿದೆ. ಇಷ್ಟೊಂದು ಸುದೀರ್ಘ ಅವಧಿಯವರೆಗೆ ಯಾವುದೇ ಮಾಹಿತಿ ಸಿಗದ ಹಿನ್ನೆಲೆಯಲ್ಲಿ, ಯುವತಿಯರು ಮಾನವ ಕಳ್ಳಸಾಗಣೆ ಜಾಲಕ್ಕೆ ಸಿಲುಕಿರಬಹುದೇ ಎಂಬ ಆಯಾಮದಲ್ಲೂ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.ಸಿಐಡಿ ಅಧಿಕಾರಿಗಳೊಂದಿಗೆ ಯಲಹಂಕ ಮತ್ತು ವಿದ್ಯಾರಣ್ಯಪುರ ಪೊಲೀಸ್‌ ಸಿಬ್ಬಂದಿ ಸೇರಿ ತನಿಖೆ ನಡೆಸುತ್ತಿದ್ದಾರೆ. ಪೋಷಕರು ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಕೋರ್ಟ್ ಸೂಚನೆಯಂತೆ ಕಳೆದ 3 ತಿಂಗಳ ಹಿಂದೆ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಗಿದೆ.

 

Related Articles

Back to top button
error: Content is protected !!