ನೂತನ ಸಚಿವರಿಗೆ ಖಾತೆ ಹಂಚಿಕೆ ಪಟ್ಟಿ ಪ್ರಕಟ: ಯಾರಿಗೆ ಯಾವ ಖಾತೆ?
Views: 48
ಕನ್ನಡ ಕರಾವಳಿ ಸುದ್ದಿ:ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕರ್ನಾಟಕ ಸರ್ಕಾರದ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಿ ರಾಜ್ಯಪಾಲರ ಕಚೇರಿ ಬುಧವಾರ ಅಧಿಸೂಚನೆ ಹೊರಡಿಸಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಖಾತೆ ಹಂಚಿಕೆ ಮಾಡಲಾಗಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹಣಕಾಸು, ಸಚಿವ ಸಂಪುಟ ವ್ಯವಹಾರ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಗುಪ್ತಚರ, ಮಾಹಿತಿ, ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ ಮತ್ತು ಶಾಸನ, ಕೃಷಿ ಮಾರುಕಟ್ಟೆ, ಪಟ್ಟಣ ಮತ್ತು ನಗರ ಯೋಜನೆ ಆಯುಕ್ತಾಲಯ, ಬಿಡಿಎ ಹಾಗೂ ಬಿಎಂಆರ್‌ಡಿಎ ವ್ಯಾಪ್ತಿಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಹಂಚಿಕೆಯಾಗದ ಖಾತೆಗಳನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ.
ಖಾತೆ ಹಂಚಿಕೆ ಪಟ್ಟಿ
ಜಮೀರ್ ಅಹಮದ್ ಖಾನ್ — ವಸತಿ
ರಾಮಲಿಂಗಾರೆಡ್ಡಿ — ಅರಣ್ಯ, ಪರಿಸರ ಮತ್ತು ಪರಿಸರ ವಿಜ್ಞಾನ
ಲಕ್ಷ್ಮಣ ಸವದಿ — ಕೃಷಿ ಮಾರುಕಟ್ಟೆ ಹೊರತುಪಡಿಸಿ ಸಹಕಾರ
ರುದ್ರಪ್ಪ ಮನಪ್ಪ ಲಮಾಣಿ — ಸಕ್ಕರೆ ಮತ್ತು ಜವಳಿ
ಕೆ.ಎಚ್. ಮುನಿಯಪ್ಪ — ಸಮಾಜ ಕಲ್ಯಾಣ
ಶಿವರಾಜ ತಂಗಡಗಿ — ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ
ಯು.ಟಿ. ಖಾದರ್ — ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಟಿ. ರಘುಮೂರ್ತಿ — ಪರಿಶಿಷ್ಟ ಪಂಗಡಗಳ ಕಲ್ಯಾಣ
ಡಾ. ಅಜಯ್ ಸಿಂಗ್ — ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ
ಚೆಲುವರಾಯಸ್ವಾಮಿ — ಬೃಹತ್ ಮತ್ತು ಮಧ್ಯಮ ನೀರಾವರಿ
ಮಧು ಬಂಗಾರಪ್ಪ — ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
ಬಸವರಾಜ ರಾಯರೆಡ್ಡಿ — ಉನ್ನತ ಶಿಕ್ಷಣ
ಶಿವಲಿಂಗೇಗೌಡ — ಹಣಕಾಸು ಇಲಾಖೆಯಿಂದ ಅಬಕಾರಿ
ಪುಟ್ಟರಂಗ ಶೆಟ್ಟಿ — ಪಶುಸಂಗೋಪನೆ ಮತ್ತು ರೇಷ್ಮೆ
ವಿಜಯಾನಂದ ಕಾಶಪ್ಪನವರ್ — ಸಣ್ಣ ಕೈಗಾರಿಕೆಗಳು, ಸಾರ್ವಜನಿಕ ಉದ್ದಿಮೆಗಳು
ಸಂತೋಷ್ ಲಾಡ್ — ಕಾರ್ಮಿಕ ಮತ್ತು ಉದ್ಯೋಗ
ಕೆ.ಎಸ್. ಬಸವಂತಪ್ಪ — ಮುಜರಾಯಿ, ಮೀನುಗಾರಿಕೆ, ಬಂದರುಗಳು ಮತ್ತು ಒಳನಾಡು ಜಲಸಾರಿಗೆ
ಎಸ್.ಎಸ್. ಮಲ್ಲಿಕಾರ್ಜುನ — ಗಣಿ ಮತ್ತು ಭೂವಿಜ್ಞಾನ, ತೋಟಗಾರಿಕೆ
ರಿಜ್ವಾನ್ ಅರ್ಷದ್ — ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳು
ನರೇಂದ್ರ ಸ್ವಾಮಿ — ಕೃಷಿ
ಎಚ್.ಸಿ. ಬಾಲಕೃಷ್ಣ — ನಗರಾಡಳಿತ
ಬಿ. ನಾಗೇಂದ್ರ — ಯೋಜನೆ ಮತ್ತು ಸಾಂಖ್ಯಿಕ






