ಇತರೆ

ಬೈಕ್ ಹೈವೋಲ್ಟೇಜ್ ವಿದ್ಯುತ್ ತಂತಿ ಸ್ಪರ್ಶಿಸಿ ಮೂವರು ಯುವಕರು ಸ್ಥಳದಲ್ಲೇ ಸಾವು 

Views: 64

ಕನ್ನಡ ಕರಾವಳಿ ಸುದ್ದಿ: ತುಂಡಾಗಿ ಬಿದ್ದಿದ್ದ 11 ಕೆವಿಯ ಹೈವೋಲ್ಟೇಜ್ ವಿದ್ಯುತ್ ತಂತಿ ಸ್ಪರ್ಶಿಸಿ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಕರೌಲಿ ಜಿಲ್ಲೆಯ ತೋಡಭಿಮ್ ಉಪವಿಭಾಗದಲ್ಲಿ ಸೋಮವಾರ ನಡೆದಿದೆ.

ಭೋಪರ್ ಗ್ರಾಮದ ಸಮೀಪದಲ್ಲಿರುವ ನದಿಯ ಪಕ್ಕದಲ್ಲಿ ಈ ದುರ್ಘಟನೆ ಸಂಭವಿಸಿದೆ. ಮೃತ ಮೂವರು ಯುವಕರು ಒಂದೇ ಗ್ರಾಮದ ನಿವಾಸಿಗಳಾಗಿದ್ದಾರೆ.

ಅಖ್ವಾಡಾ ಗ್ರಾಮದ ನಿವಾಸಿಗಳಾದ ರಾಂಬಾಬು, ವಿಷ್ಣು ಚೌಬೆ ಮತ್ತು ಜಾತವ್ ಮೂವರು ಯಾವುದೋ ಕೆಲಸದ ನಿಮಿತ್ತ ಒಂದೇ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ, ಅವರ ಬೈಕ್ ಹೈವೋಲ್ಟೇಜ್ ತಂತಿಗೆ ತಗುಲಿದೆ. ಪರಿಣಾಮ, ಬಲವಾದ ವಿದ್ಯುತ್ ಪ್ರವಾಹದಿಂದ ಮೂವರು ಸುಟ್ಟು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಎಷ್ಟು ಭೀಕರವಾಗಿತ್ತು ಎಂದರೆ ಅವರ ಬೈಕ್ ಕೆಲವೇ ಸೆಕೆಂಡುಗಳಲ್ಲಿ ಸಂಪೂರ್ಣವಾಗಿ ಸುಟ್ಟು ಬೂದಿಯಾಗಿದೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇದು ವಿದ್ಯುತ್ ಇಲಾಖೆಯ ನಿರ್ಲಕ್ಷ್ಯ. ಇಲಾಖೆಯ ಸಣ್ಣ ತಪ್ಪಿನಿಂದಾಗಿ ಮೂವರು ಯುವಕರು ಪ್ರಾಣ ಕಳೆದುಕೊಂಡಿದ್ದಾರೆ. ಅಧಿಕಾರಿಗಳು ಈ ಬಗ್ಗೆ ಉತ್ತರಿಸಬೇಕು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿ ತಿಳಿದ ತಕ್ಷಣ, ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಪೊಲೀಸರಿಗೆ ತಿಳಿಸಿದ್ದಾರೆ. ಮಾಹಿತಿ ತಿಳಿದ ಪೊಲೀಸರು ಮತ್ತು ವಿದ್ಯುತ್ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಹರಿಯುತ್ತಿರುವ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಿದರು.

ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಸಂಬಂಧಪಟ್ಟ ಇಲಾಖೆ ಗಮನಿಸಿದ್ದರೆ, ಈ ದುರಂತ ನಡೆಯುತ್ತಿರಲಿಲ್ಲ. ವಿದ್ಯುತ್ ಇಲಾಖೆಯು ಅದನ್ನು ಸಕಾಲದಲ್ಲಿ ಸರಿಪಡಿಸಲು ವಿಫಲವಾಗಿದೆ. ಸಮಯಕ್ಕೆ ಸರಿಯಾಗಿ ತಂತಿಯನ್ನು ಸ್ಥಗಿತಗೊಳಿಸಿ ತಂತಿಯನ್ನು ಸರಿಪಡಿಸಿದ್ದರೆ, ಈ ದೊಡ್ಡ ದುರಂತವನ್ನು ತಪ್ಪಿಸಬಹುದಿತ್ತು ಎಂದು ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

Related Articles

Back to top button
error: Content is protected !!