ಇತರೆ

ಗುರುಕುಲ ವಿದ್ಯಾಸಂಸ್ಥೆಯಲ್ಲಿ ಡ್ರಕ್ಸ್ ವಿರುದ್ಧ ಜಾಗೃತಿ ಕಾರ್ಯಕ್ರಮ

Views: 0

ಕನ್ನಡ ಕರಾವಳಿ ಸುದ್ದಿ: ಕುಂದಾಪುರದ ವಕ್ವಾಡಿಯ ಗುರುಕುಲ ವಿದ್ಯಾಸಂಸ್ಥೆಯಲ್ಲಿ ಬಾಂಡ್ಯಾ ಎಜುಕೇಶನಲ್ ಟ್ರಸ್ಟ್ ಹಾಗೂ ವಿಜಯ ಕರ್ನಾಟಕ ದಿನಪತ್ರಿಕೆ ಯ ಸಹಯೋಗದಲ್ಲಿ ಡ್ರಗ್ಸ್ ವಿರುದ್ಧ ಜಾಗೃತಿ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಹರಿರಾಮ್ ಶಂಕರ್ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ – ಮಾದಕ ವಸ್ತುಗಳ ವಿರುದ್ಧ ಹೋರಾಟ ಮಾಡಲೇಬೇಕಾದಾಗ ಅಗತ್ಯತೆ ಇಂದು ಬಹಳ ತುರ್ತಾಗಿ ಇದೆ. ಸಾಮಾಜಿಕ ಜಾಲತಾಣಗಳಲ್ಲಿ ಮಾದಕ ವ್ಯಸನಿಗಳನ್ನು ಒಂದು ಪೌರುಷ ಎಂಬ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಯುವಜನತೆ ಇಂತಹ ವಿಚಾರಗಳನ್ನು ಅನುಸರಿಸಿದಾಗ ಅವರ ಬದುಕು ನಾಶವಾಗುವುದಲ್ಲದೆ ಸಮಾಜಕ್ಕೂ ಕಂಟಕ ಪ್ರಾಯರಾಗುತ್ತಾರೆ. ಆರಂಭದಲ್ಲಿ ತಮಾಷೆ ಮೋಜಿಗಾಗಿ ಮಾಡಿದ ಅಭ್ಯಾಸಗಳು ಮುಂದೆ ಅವರ ಬದುಕನ್ನು ಬಲಿಪಡೆಯುತ್ತದೆ. ಭಾರತದ ಯುವ ಜನತೆಯನ್ನು ಅಸಮರ್ಥಗೊಳಿಸಲು ವಿದೇಶಿಗಳ ಹುನ್ನಾರವು ಇದರಲ್ಲಿ ಇರುವುದು ಕಂಡು ಬರುತ್ತಿದ್ದು, ಇದರಿಂದ ದೇಶದ ಅಭಿವೃದ್ಧಿಯು ಕುಂಠಿತವಾಗುತ್ತಿದೆ. ಯುವಕರು, ವಿದ್ಯಾರ್ಥಿಗಳು ಇದರಿಂದ ಎಚ್ಚೆತ್ತು ವೈಯಕ್ತಿಕ ಬದುಕನ್ನು ಉಳಿಸಿಕೊಳ್ಳುವುದಲ್ಲದೆ, ದೇಶದ ಅಭಿವೃದ್ಧಿಗೆ ಪೂರಕ ರಾಗಬೇಕು ಎಂದು ಕರೆ ಕೊಟ್ಟರು.ಬಾಂಡ್ಯ ಎಜುಕೇಶನಲ್ ಟ್ರಸ್ಟ್ ನ ಜಂಟಿ ಕಾರ್ಯನಿರ್ವಾಕರಾದ ಶ್ರೀ ಕೆ ಸುಭಾಶ್ಚಂದ್ರ ಶೆಟ್ಟಿ ಅವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ – ಇದೊಂದು ಸಾಧಕ ಕಾರ್ಯಕ್ರಮ ಇಂತಹ ಕಾರ್ಯಕ್ರಮವು ಪ್ರತಿ ಶಿಕ್ಷಣ ಸಂಸ್ಥೆಯಲ್ಲೂ ಅಗತ್ಯವಾಗಿ ಮೂಡಿಬಂದು ವಿದ್ಯಾರ್ಥಿಗಳು ಮಾದಕ ವ್ಯಸನದ ವಿರುದ್ಧ ಜಾಗೃತರಾಗಿ ಒಗ್ಗಟ್ಟಿನಿಂದ ಹೋರಾಡಬೇಕು ಎಂದರು. ಮುಖ್ಯ ಅತಿಥಿ ಶ್ರೀಮತಿ ಶೋಭಾ ಶೆಟ್ಟಿ ಕ್ಷೇತ್ರ ಶಿಕ್ಷಣಾಧಿಕಾರಿ ಕುಂದಾಪುರ ವಲಯ ಇವರು ಮಾತನಾಡಿ – ಮಾದಕ ವ್ಯಸನಿಗಳ ವಿರುದ್ಧ ವಿದ್ಯಾರ್ಥಿಗಳು ಜಾಗೃತರಾಗಬೇಕು. ಅಲ್ಲದೆ ವಿದ್ಯಾರ್ಥಿಗಳು ಮಾದಕ ವ್ಯಸನದಿಂದ ದೂರ ಉಳಿದು ತಮ್ಮ ಶೈಕ್ಷಣಿಕ ಬದುಕನ್ನು ಹಸನಾಗಿಸಿಕೊಳ್ಳುವುದಲ್ಲದೆ ಸಮಾಜದ ಬೆಳವಣಿಗೆಗೆ ಜೊತೆಯಾಗಬೇಕು ಎಂದರು. ಸಂಪನ್ಮೂಲ ವ್ಯಕ್ತಿಗಳಾದ ಡಾ. ಪ್ರಕಾಶ್ ತೋಳಾರ್ ಮನೋವೈದ್ಯರು ಶ್ರೀಮಾತ ಆಸ್ಪತ್ರೆ ಕುಂದಾಪುರ ಇವರು ಮಾತನಾಡಿ ಮಾದಕ ವಸ್ತು ಗಳ ವ್ಯಸನ ಯುವ ಜನತೆಯಲ್ಲಿ ದಿನ ದಿನಕ್ಕೆ ಜಾಸ್ತಿ ಆಗುತ್ತಿರುವ ಸಂದರ್ಭದಲ್ಲಿ ಅದರ ವಿರುದ್ಧ ಹೋರಾಡಬೇಕಾದದ್ದು ನಮ್ಮೆಲ್ಲರ ಆದ್ಯ ಕರ್ತವ್ಯ. ಜೆನೆಟಿಕ್ ನಿಂದಲೂ ಮಾದಕ ವ್ಯಸನಗಳಾಗುವ ಸಾಧ್ಯತೆ ಇರುವುದರಿಂದ ವಿದ್ಯಾರ್ಥಿಗಳಲ್ಲಿ ಇದರ ಅರಿವು ಅಗತ್ಯ. ಇಂತಹ ವ್ಯಸನದಿಂದ ಗಂಭೀರ ಸಮಸ್ಯೆಗಳಾದ ಕ್ಯಾನ್ಸರ್, ಮೆದುಳು ನಿಷ್ಕ್ರಿಯಗೊಳ್ಳುವುದು, ಮಾನಸಿಕ ರೋಗಿಗಳಾಗುವುದು, ಕೊಲೆಗಡುಕರಾಗಿ ಪರಿವರ್ತನೆ ಹೊಂದುವುದು ಇಂದಿನ ಸಮಾಜದಲ್ಲಿ ಕಾಣಬಹುದು.

ವಿದ್ಯಾರ್ಥಿಗಳು ಇಂತಹ ವ್ಯಸನಗಳಿಂದ ದೂರ ಇದ್ದು ಶೈಕ್ಷಣಿಕವಾಗಿ ಉತ್ತಮ ಬದುಕನ್ನು ಕಟ್ಟಿಕೊಳ್ಳಬೇಕು ಎಂದರು. ಶ್ರೀ ನಂಜಾ ನಾಯ್ಕ್ ಪಿಎಸ್ಐ ಕುಂದಾಪುರ ನಗರ ಠಾಣೆ ಇವರು ವಿದ್ಯಾರ್ಥಿಗಳಿಗೆ ಸಾಕ್ಷಿ ಚಿತ್ರದ ಮೂಲಕ ಮಾದಕ ವ್ಯಸನದ ವಿರುದ್ಧ ಜಾಗೃತಿ ಮೂಡಿಸಿದರು. ಶ್ರೀ ನೀಲೇಶ್ ಪೂಜಾರಿ ಸೈಬರ್ ತಾಂತ್ರಿಕ ಸಿಬ್ಬಂದಿ ಸೈಬರ್ ಕ್ರೈಮ್ ಪೊಲೀಸ್ ಠಾಣೆ ಉಡುಪಿ ಜಿಲ್ಲೆ ಇವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಾ ಸೈಬರ್ ಕ್ರೈಂ ಕುರಿತು ಅರಿವು ಮೂಡಿಸಿದರು. ಬಾಂಡ್ಯಾ ಎಜುಕೇಶನಲ್ ಟ್ರಸ್ಟ್ ನ ಜಂಟಿ ಕಾರ್ಯನಿರ್ವಾಹಕರಾದ ಶ್ರೀಮತಿ ಅನುಪಮಾ ಎಸ್ ಶೆಟ್ಟಿ ಅವರು ತಮ್ಮ ಆಶಯ ನುಡಿಯಲ್ಲಿ ಗುರುಕುಲ ವಿದ್ಯಾ ಸಂಸ್ಥೆಯ ಒಟ್ಟು ಕಾರ್ಯ ಚಟುವಟಿಕೆಗಳ ವಿವರ ನೀಡುತ್ತಾ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಪಠ್ಯೇತರ ಚಟುವಟಿಕೆಗಳೊಂದಿಗೆ ವಿದ್ಯಾರ್ಥಿಗಳ ಕ್ರಿಯಾಶೀಲತೆಗೆ ಪೂರಕವಾಗಿ ನಾವು ಹೆಜ್ಜೆ ಇಡುತ್ತಿದ್ದೇವೆ. ಕೃಷಿ, ಹೈನುಗಾರಿಕೆ, ಔಷಧಿ ಸಸ್ಯಗಳ ಪರಿಜ್ಞಾನವನ್ನು ನಮ್ಮ ವಿದ್ಯಾರ್ಥಿಗಳು ಇಲ್ಲಿ ಹೊಂದುತ್ತಿದ್ದಾರೆ. ಮಾದಕ ವ್ಯಸನದ ವಿರುದ್ಧ ಹೋರಾಟದೊಂದಿಗೆ, ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿ ಅದರ ನಿರ್ಮೂಲನೆಗೆ ನಾವೆಲ್ಲ ಕೈಜೋಡಿಸಬೇಕು ಎಂದರು.

ವಿಷಯ ಕರ್ನಾಟಕ ದಿನಪತ್ರಿಕೆಯ ಕುಂದಾಪುರ ವಲಯದ ಹಿರಿಯ ವರದಿಗಾರ ಶ್ರೀ ಜಾನ್ ಡಿಸೋಜರವರು ಈ ಅಭಿಯಾನದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

ಶಿಕ್ಷಕಿ ಶ್ರೀಮತಿ ನಾಗರತ್ನ ಕಾರ್ಯಕ್ರಮ ನಿರ್ವಹಿಸಿದ್ದು, ಪ್ರಾಂಶುಪಾಲರಾದ ಡಾ. ರೂಪ ಶೆಣೈ ಸ್ವಾಗತಿಸಿದರು. ಶಿಕ್ಷಕಿ ಶ್ರೀಮತಿ ಪ್ರಿಯಾಂಕ ಪ್ರಾರ್ಥಿಸಿದರೆ, ಶಿಕ್ಷಕಿ ಶ್ರೀಮತಿ ವಿಜಯಲಕ್ಷ್ಮಿ ಅತಿಥಿ ಗಳನ್ನು ಪರಿಚಯಿಸಿದರು. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸಂದೀಪ್ ನಾಯ್ಕ ವಂದಿಸಿದರು.

Related Articles

Back to top button
error: Content is protected !!