ನಟಿ ಕೃಷಿ ತಾಪಂಡ ಅಪಾರ್ಟ್‌ಮೆಂಟ್‌ನಲ್ಲಿ ಉದ್ಯಮಿ ಆತ್ಮಹತ್ಯೆ, ವೈಶಾಖ್ ಪತ್ನಿ ದೂರಿನಲ್ಲಿ ಹೇಳಿದ್ದೇನು?
Views: 77
ಕನ್ನಡ ಕರಾವಳಿ ಸುದ್ದಿ: ನಟಿ ಕೃಷಿ ತಾಪಂಡ ಮನೆಯಲ್ಲಿ ಅವರ ಆಪ್ತ ಸ್ನೇಹಿತ ವೈಶಾಖ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಹಿನ್ನೆಲೆ ವೈಶಾಖ್ ಪತ್ನಿ ಮೇಘನಾ ಠಾಣೆ ಮೆಟ್ಟಿಲೇರಿದ್ದಾರೆ.
ಆರ್‌ಆರ್ ನಗರದ ಎಲಿಗೇಟ್ ಅಪಾರ್ಟ್‌ಮೆಂಟ್‌ನಲ್ಲಿ ಕೃಷಿ ತಾಪಂಡ ಫ್ಲಾಟ್ ಇದ್ದು, ಆಕೆಯ ಬೆಡ್‌ರೂಮ್‌ನಲ್ಲಿ ವೈಶಾಖ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಹೆಂಡತಿ ಮಕ್ಕಳು ಇದ್ದರೂ ವೈಶಾಖ್ ಕೃಷಿ ಮನೆಯಲ್ಲಿ ಯಾಕೆ ವಾಸವಿದ್ದರು? ಕೃಷಿ ಮನೆಯ ಒಂದು ಬೀಗ ಅವರ ಬಳಿ ಇದ್ದದ್ದು ಯಾಕೆ? ಸಾಯುವ ಮುನ್ನ ಪತ್ನಿ, ಮಗನನ್ನು ನೆನೆಸಿಕೊಳ್ಳದೇ ಕೃಷಿಗೆ ಕಡೆಯ ಕಾಲ್ ಹಾಗೂ ಮೆಸೇಜ್ ಮಾಡಿದ್ಯಾಕೆ ಎನ್ನುವ ಅನುಮಾನಗಳು ಕಾಡುತ್ತಿವೆ.
ವೈಶಾಖ್ ಪತ್ನಿ ಮೇಘನಾ ಆರ್‌ಆರ್ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, ನಟಿಯ ಜೊತೆ ಪತಿಯ ಅಕ್ರಮ ಸಂಬಂಧದ ಬಗ್ಗೆ ಉಲ್ಲೇಖಿಸಿದ್ದಾರೆ. ಪತ್ನಿಯ ಜೊತೆ ಜಗಳ ಆದಾಗಲೆಲ್ಲ ವೈಶಾಖ್ ಕೃಷಿ ಮನೆಗೆ ಬಂದಿರುತ್ತಿದ್ದರು. ವಾರದ ಹಿಂದೆ ಜಗಳವಾಡಿದ್ದ ವೈಶಾಖ್ ಕೃಷಿ ಮನೆಗೆ ಬಂದು ಸೇರಿದ್ದರು. ಕೃಷಿ ಎಕ್ಸ್ ಬಾಯ್‌ಫ್ರೆಂಡ್ ಅರವಿಂದ ರೆಡ್ಡಿಗೆ ಇದೇ ವೈಶಾಖ್ ಬೆದರಿಕೆ ಹಾಕಿದ್ದರು. ಇದರಿಂದ ಜೈಲಿಗೂ ಹೋಗಿ ಬಂದಿದ್ದರು. ಈ ವಿಷಯವಾಗಿ ಪತಿ ಪತ್ನಿ ನಡುವೆ ಸದಾ ಜಗಳ ಆಗುತ್ತಿತ್ತು ಎನ್ನಲಾಗಿದೆ.
ದೂರಿನಲ್ಲಿ, ನಿನ್ನೆ ರಾತ್ರಿ 11.30ರ ಸುಮಾರಿಗೆ ಪೊಲೀಸ್ ರಿಂದ ನಮಗೆ ಮಾಹಿತಿ ಬಂತು. ಕೃಷಿ ತಾಪಂಡ ಅವರ ಫ್ಲಾಟ್ ನಂಬರ್ 403ರಲ್ಲಿ ಪತಿ ಆತ್ಮಹತ್ಯೆ ಬಗ್ಗೆ ಮಾಹಿತಿ ನೀಡಿದರು.
ಮಾಹಿತಿ ಅನ್ವಯ ನಾವು ಫ್ಲಾಟ್ ಗೆ ಹೋಗಿ ನೋಡಿದಾಗ, ಕೃಷಿ ತಾಪಂಡ ಬೆಡ್‌ರೂಮ್‌ನಲ್ಲಿ ಫ್ಯಾನಿಗೆ ನೇಣಿಗೆ ಶರಣಾಗಿದ್ದು, ಅಂಗಾತ ಮಲಗಿರುವ ರೀತಿಯಲ್ಲಿ ಮೃತ ದೇಹ ಕಂಡು ಬಂದಿತು ಎಂದು ಹೇಳಿದ್ದಾರೆ.
ನನ್ನ ಹಾಗೂ ನನ್ನ ಪತಿ ಮಧ್ಯೆ ಸಾಕಷ್ಟು ವಿರಸ ಇತ್ತು. ನಮ್ಮಿಬ್ಬರ ಮಧ್ಯೆ ಆಗಾಗ ಜಗಳ ನಡೆಯುತ್ತಲೆ ಇತ್ತು. ಕೇವಲ ಮೆಸೇಜ್ ಮೂಲಕ 14 ವರ್ಷದ ಮಗನ ಬಗ್ಗೆ ವಿಚಾರಿಸುತ್ತಿದ್ದರು. ಆದ್ರೆ ನನ್ನ ಬಗ್ಗೆ ಏನೂ ಕೇಳುತ್ತಿರಲಿಲ್ಲ ಎಂದು ಪತ್ನಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇತ್ತ ವೈಶಾಖ್ ಸ್ನೇಹಿತರ ಆತ ಗಟ್ಟಿ ಮನುಷ್ಯ ಆತ್ಮಹತ್ಯೆಗೆ ಶರಣಾಗುವಷ್ಟು ವೀಕ್ ಇರಲಿಲ್ಲ ಎಂದು ಹೇಳಿದ್ದಾರೆ.
ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸಾವಿಗೆ ನಿಜವಾದ ಕಾರಣ ಪತ್ತೆಹಚ್ಚಲು ತನಿಖೆ ಆರಂಭಿಸಿದ್ದಾರೆ.






