ಇತರೆ
ಸಾಸ್ತಾನ: ನಿವೃತ್ತ ಪೋಸ್ಟ್ ಮಾಸ್ಟರ್ ಚಂದ್ರಶೇಖರ ಶೆಟ್ಟಿಗಾರ ಗುಂಡ್ಮಿ ಹೃದಯಾಘಾತದಿಂದ ನಿಧನ
Views: 397
ಕನ್ನಡ ಕರಾವಳಿ ಸುದ್ದಿ: ಸಾಸ್ತಾನ ಅಂಬಾಗಿಲು ನಿವಾಸಿ ನಿವೃತ್ತ ಪೋಸ್ಟ್ ಮಾಸ್ಟರ್ ಚಂದ್ರಶೇಖರ ಶೆಟ್ಟಿಗಾರ ಗುಂಡ್ಮಿ(60) ಅವರು ಜೂನ್ 22 ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮೃತರ ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.
ಅಂಚೆ ಕಚೇರಿಯಲ್ಲಿ 36 ವರ್ಷಗಳ ಸೇವೆ ಸಲ್ಲಿಸಿ ಬ್ರಹ್ಮಾವರ ಅಂಚೆ ಕಚೇರಿಯಲ್ಲಿ ನಿವೃತ್ತಿ ಹೊಂದಿದ ಚಂದ್ರಶೇಖರ್ ಶೆಟ್ಟಿಗಾರ್ ಗುಂಡ್ಮಿ ಅವರಿಗೆ ಬ್ರಹ್ಮಾವರ ಅಂಚೆ ಮನೋರಂಜನಾ ಕೂಟದಿಂದ ಎ.30ರಂದು ಬೀಳ್ಕೊಡುಗೆ ಸನ್ಮಾನ ನಡೆದಿತ್ತು.
ಇವರು ಸಾಸ್ತಾನ ಎಡಬೆಟ್ಟು, ಉಡುಪಿ, ಮಣಿಪಾಲ ಬ್ರಹ್ಮಾವರ ಅಂಚೆ ಕಚೇರಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.

ಚಂದ್ರಶೇಖರ್ ಶೆಟ್ಟಿಗಾರ್ ಅವರು ಬಾರ್ಕೂರು ದೇವಸ್ಥಾನದ ಬ್ರಹ್ಮಲಿಂಗ ವೀರಭದ್ರ ಪದ್ಮಶಾಲಿ /ಶೆಟ್ಟಿಗಾರ್ ಸಮಾಜ ಸೇವಾ ಟ್ರಸ್ಟ್ ಕಾರ್ಯದರ್ಶಿಯಾಗಿ, ಸಾಸ್ತಾನ ವಲಯ ಪದ್ಮಶಾಲಿ ಸಮಾಜ ಸೇವಾ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.







